More

    ಕರೊನಾದೊಂದಿಗೆ ಬದುಕು ಅನಿವಾರ್ಯ, ಎಂಎಲ್‌ಸಿ ಎಂಟಿಬಿ ನಾಗರಾಜ್ ಹೇಳಿಕೆ

    ಸೂಲಿಬೆಲೆ: ಕರೊನಾದೊಂದಿಗೆ ಬದುಕು ನಡೆಸುವುದು ಅನಿವಾರ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.

    ಪಟ್ಟಣದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕರೊನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿ, ಮುಂಜಾಗ್ರತೆ ಕ್ರಮಗಳಾದ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾದೊಂದಿಗೆ ಹೊಂದಾಣಿಕೆ ಜೀವನ ನಡೆಸಬೇಕು ಎಂದರು.

    ವೀರಶೈವ ಲಿಂಗಾಯತ ಯುವ ವೇದಿಕೆ ತಾ.ಉಪಾಧ್ಯಕ್ಷ ಎಂ.ಆರ್.ಉಮೇಶ್ ಮಾತನಾಡಿ, ಪೊಲೀಸ್, ವೈದ್ಯರು, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಜೀವದ ಹಂಗುತೊರೆದು ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದು ಇವರ ಸೇವೆ ವಿಶೇಷವಾಗಿ ಪರಿಗಣಿಸಿ ವೀರಶೈವ ಲಿಂಗಯತ ಯುವ ವೇದಿಕೆ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

    ವೀರಶೈವ ಲಿಂಗಾಯತ ಯುವ ವೇದಿಕೆ ಪದಾಧಿಕಾರಿಗಳಾದ ಜೆಆರ್‌ಡಿ ಪ್ರಕಾಶ್, ಎಸ್.ಸಿ.ರವಿಕುಮಾರ್,
    ರಾಜ್‌ಕುಮಾರ್, ತಾವರೆಕೆರೆ ಅರುಣ್, ದೊಡ್ಡನಲ್ಲಾಳ ಪರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮರವೆ ಕೃಷ್ಣಪ್ಪ, ಸದಸ್ಯ ಕೆಇಬಿ ಮಹೇಶ್, ಕುರುಬರ ಸಂಘದ ತಾ.ಅಧ್ಯಕ್ಷ ರಘುವೀರ್ ಇದ್ದರು.

    ಪಿಡಿಒಗೆ ಎಂಟಿಬಿ ತರಾಟೆ: ಪಿಡಿಒ ಚೈತ್ರಾ ಏಕಪಕ್ಷೀಯವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಸೇರಿ ಗ್ರಾಪಂ ಸದಸ್ಯರು ಎಂಟಿಬಿ ನಾಗರಾಜ್‌ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಿಡಿಒಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರ ನಿಮಗೆ ಸಂಬಳ ನೀಡುತ್ತೆ ನೀವು ಏಕಪಕ್ಷೀಯವಾಗಿ ಯಾರದೋ ಕೈಗೊಂಬೆಯಾಗಿ ಕೆಲಸ ಮಾಡದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರಿ. ಇಲ್ಲದಿದ್ದರೆ ಗಂಟುಮೂಟೆ ಕಟ್ಟಿ. ಬೇರೆ ಯಾರಾದರೂ ಬಂದು ಕೆಲಸ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts