More

    ಸತ್ತ ಮೇಲೂ ಏಳು ರೋಗಿಗಳ ಜೀವ ಉಳಿಸಲು ಕಾರಣನಾದ ಬಾಲಕ!

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ 15 ವರ್ಷದ ಬಾಲಕ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಏಳು ರೋಗಿಗಳ ಜೀವ ಉಳಿಸಿದ್ದಾನೆ.

    ಮಾ.31ರ ಸಂಜೆ 8.30ಕ್ಕೆ ನಗರದ ಬಿಎಚ್‌ಇಎಲ್ ಲೇಔಟ್‌ನಲ್ಲಿ ನಡೆದ ಅಪಘಾತದಲ್ಲಿ ರಾಮು (ಹೆಸರು ಬದಲಿಸಲಾಗಿದೆ) ಎಂಬ ಬಾಲಕನ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏ.3ರಂದು ಬಾಲಕನ ಮಿದುಳು ನಿಷ್ಕ್ರಿಯವಾಗಿತ್ತು. ಮೃತಪಟ್ಟ ರಾಮು ಅಂಗಾಂಗ ದಾನ ಮಾಡುವುದಕ್ಕೆ ಪಾಲಕರು ಒಪ್ಪಿಗೆ ಕೊಟ್ಟರು.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಬಳಿಕ ರಾಮುನ ಎರಡು ಕಿಡ್ನಿ, ಶ್ವಾಸಕೋಶ, ಹೃದಯದ ಕವಾಟ, ಯಕೃತ್, ಕಣ್ಣು ಹಾಗೂ ಸಣ್ಣ ಕರುಳನ್ನು ಬೆಂಗಳೂರು ಹಾಗೂ ಚೆನ್ನೈ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಬಾಲಕನ ಸಣ್ಣ ಕರುಳನ್ನು ಸ್ಪರ್ಶ ಆಸ್ಪತ್ರೆಯಿಂದ ರಾಜರಾಜೇಶ್ವರಿನಗರದ ಹೆಲಿಪ್ಯಾಡ್‌ಗೆ ಆಂಬುಲೆನ್ಸ್‌ನಲ್ಲಿ ಸಾಗಿಸಲಾಯಿತು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಚೆನ್ನೈಗೆ ಏರ್‌ಲಿಫ್ಟ್​ ಮಾಡಿ ವೈದ್ಯರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗ ಜೋಡಿಸಿದರು.

    ಇದನ್ನೂ ಓದಿ: ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

    ರಾಜ್ಯದಲ್ಲಿ ಅಂಗಾಂಗ ದಾನಗಳ ಬಗ್ಗೆ ನಿಗಾ ವಹಿಸುವ ಸಂಸ್ಥೆಯಾಗಿರುವ ಸ್ಟೇಟ್ ಆರ್ಗನ್ ಆ್ಯಂಡ್ ಟಿಷ್ಯೂ ಟ್ರಾನ್ಸ್​ಪ್ಲಾಂಟ್​ ಆರ್ಗನೈಸೇಷನ್ ಅಧಿಕಾರಿಗಳು, ನಿಯಮದಂತೆ ಮೃತ ಬಾಲಕನ ಕುಟುಂಬ ಸದಸ್ಯರ ಲಿಖಿತ ಅನುಮತಿ ಪಡೆದು ಈ ಪ್ರಕ್ರಿಯೆ ನಡೆಸಿದರು.

    ಸದ್ಯದಲ್ಲೇ ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಮೂರನೇ ಪಟ್ಟಿ ಬಿಡುಗಡೆ ಬೆನ್ನಿಗೇ ಆಕಾಂಕ್ಷಿಯ ಅಸಮಾಧಾನ

    ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts