More

    ಸೇವಾ ಕಾರ್ಯಗಳಿಂದ ಜೀವನ ಸಾರ್ಥಕ್ಯ

    ಶಿವಮೊಗ್ಗ: ಯಾವುದೇ ವ್ಯಕ್ತಿ ಅವರ ಸೇವೆಯ ಮೂಲಕ ಮರಣಾನಂತರವೂ ಜೀವಂತವಾಗಿರುತ್ತಾರೆ. ಇದಕ್ಕೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರಾಗಿದ್ದ, ನಿವೃತ್ತ ಅಭಿಯಂತ ಅನಂತ ಕೃಷ್ಣಮೂರ್ತಿ ನಿದರ್ಶನ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

    ಬುಧವಾರ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸರಳ ಸಜ್ಜನಿಕೆಗೆ ಪ್ರತಿರೂಪವಾಗಿದ್ದವರು ಅನಂತ ಕೃಷ್ಣಮೂರ್ತಿ. ಶಿಸ್ತು, ಸಮಯ ಪ್ರಜ್ಞೆ, ಕಾರ್ಯಕ್ಷಮತೆ ಅವರ ಸಾಧಕ ಮನಸ್ಸನ್ನು ಜಾಗೃತವಾಗಿರಿಸಿತ್ತು ಎಂದು ಬಣ್ಣಿಸಿದರು.
    ಜಾತಿ, ಮತ, ಧರ್ಮವನ್ನು ಮೀರಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. 33 ವರ್ಷಗಳಿಂದ ಅವರೊಂದಿಗೆ ಉತ್ತಮ ಒಡನಾಟವಿತ್ತು. ಅವರ ಆದರ್ಶಗಳು ಎಲ್ಲರಿಗೂ ಮಾದರಿ ಎಂದು ಆಶಿಸಿದರು.
    ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ನಿಷ್ಠೆ, ಪ್ರಾಮಾಣಿಕತೆ, ಸರಳ ಜೀವನ ಮತ್ತು ಉತ್ತಮ ವ್ಯಕ್ತಿತ್ವದ ಅನಂತ ಕೃಷ್ಣಮೂರ್ತಿ ಎಲ್ಲರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.
    ಮನೋವೈದ್ಯ ಡಾ. ಕೆ.ಆರ್.ಶ್ರೀಧರ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಶಿಕ್ಷಣ ಟ್ರಸ್ಟ್‌ನ ಸಲಹೆಗಾರರಾದ ವಿಜಯವಾಮನ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts