More

    ಅಥಣಿ: ಬದುಕು ಇತರರಿಗೆ ದಾರಿದೀಪವಾಗಲಿ

    ಅಥಣಿ: ಪ್ರತಿಯೊಬ್ಬರೂ ಧರ್ಮ ಮಾರ್ಗದ ಮೂಲಕ ಬದುಕಿನಲ್ಲಿ ಪ್ರಗತಿ ಹೊಂದಬೇಕು ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

    ಶುಕ್ರವಾರ ಪಟ್ಟಣದ ಗಚ್ಚಿನಮಠದ ವಿದ್ಯಾಪೀಠ ಶಾಲೆ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಶಿವರಾತ್ರಿ ಒಂದು ದಿನದ ಆಚರಣೆಯಾಗದೇ ನಿತ್ಯದ ಆಚರಣೆಯಾಗಬೇಕು. ಧ್ಯಾನದಿಂದ ಮನಸ್ಸು ಉಲ್ಲಾಸ ಪಡೆಯುವುದರೊಂದಿಗೆ ವ್ಯಕ್ತಿ ಉತ್ತಮ ಆರೋಗ್ಯ ಹೊಂದುತ್ತಾನೆ. ಪ್ರತಿಯೊಬ್ಬರೂ ಬದುಕಿನಲ್ಲಿ ಬರುವ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸಬೇಕು. ಸಂಪಾದನೆಯ ಕೊಂಚ ಭಾಗವನ್ನು ಸಮಾಜದ ಅಭಿವೃದ್ಧಿಗೆ ನೀಡುವ ಮೂಲಕ ಇನ್ನೊಬ್ಬರ ಪ್ರಗತಿಗೆ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.

    ಸಾಮೂಹಿಕ ಲಿಂಗಪೂಜೆ ಜರುಗಿತು. ಡಾ. ಗೌರೀಶ ಪಾಟೀಲ, ಶೇಖರ ಕೋಲಾರ, ಅಶೋಕ ಹೊಸೂರ, ಅಂದಾನೆಪ್ಪ ಬಿಳ್ಳೂರ, ನಾಗರಾಜ ಪಟ್ಟಣಶೆಟ್ಟಿ, ಶೋಭಾತಾಯಿ ಮಾಗಾವಿ, ಈಶ್ವರ ಸಾಣಿಕೊಪ್ಪ, ರಾಜಶೇಖರ ಪೆಂಡಿಮಠ ಇದ್ದರು.

    ಬಸವಧರ್ಮ ಧ್ವಜಾರೋಹಣ, ಪಲ್ಲಕ್ಕಿ ಉತ್ಸವಕ್ಕೆ ಚಾಲನೆ: ಶ್ರೀ ಮಠದ ಆವರಣದಲ್ಲಿ ಬಸವಧರ್ಮ ಧ್ವಜಾರೋಹಣವನ್ನು ಬಸವಪ್ರಭು ಸ್ವಾಮೀಜಿ ನೆರವೇರಿಸಿದರು. ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರ ಮತ್ತು ಶಿವಯೋಗಿಗಳ ಲಿಂಗಹಸ್ತದಿಂದ ಬರೆದ ಬಸವಣ್ಣನವರ ವಚನಗ್ರಂಥದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ವೃಂದಗಳೊಂದಿಗೆ ಪಲ್ಲಕ್ಕಿ ಮತ್ತು ವ್ಯಾಸನತೋಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಗಚ್ಚಿನಮಠದಲ್ಲಿ ಸಮಾವೇಶಗೊಂಡಿತು. ಪಲ್ಲಕ್ಕಿ ಉತ್ಸವದಲ್ಲಿ ಹಾವೇರಿಯ ಶಾಂತಲಿಂಗ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಇತರರು ಇದ್ದರು.

    ರಾಯಬಾಗ ವರದಿ: ಪಟ್ಟಣದ ದತ್ತ ಮಂದಿರ ಆವರಣದಲ್ಲಿರುವ ಬಾಗಿ ಬಂಕನಾಥ ದೇವಸ್ಥಾನದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರ್ಚಕ ವಿಜಯ ಕುಲಕರ್ಣಿ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.

    ಖೇಮಲಾಪುರ ವರದಿ: ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಶಿವರಾತ್ರಿ ನಿಮಿತ್ಯ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸುನೀಲಗೌಡ ಪಾಟೀಲ, ಸಿದ್ದು ಧೂಪದಾಳ, ಮಹಾಂತೇಶ ಪಾಟೀಲ, ಭೀಮನಗೌಡ ಪಾಟೀಲ, ರಾಚಯ್ಯ ಸ್ವಾಮೀಜಿ, ಸಿದ್ದಯ್ಯ ಸ್ವಾಮೀಜಿ, ಕಾಡಯ್ಯ ಸ್ವಾಮೀಜಿ, ಸಿದ್ದು ಮಿರ್ಜಿ, ಅಪ್ಪಣ್ಣ ಬಿ., ದುಂಡಪ್ಪ ಗುಡೋಡಗಿ, ಮಹಾದೇವ ಚೌಗಲಾ, ಭೀಮಣ್ಣ ಸಂಕೇಶ್ವರ ಇತರರು ಇದ್ದರು.
    ಮಾಂಜರಿ ವರದಿ: ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬವನ್ನು ಶುಕ್ರವಾರ ಚಿಕ್ಕೋಡಿ ತಾಲೂಕಿನ ದಕ್ಷಿಣಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಯಡೂರು ಗ್ರಾಮದ ವೀರಭದ್ರ ದೇವಾಲಯ, ಅಂಕಲಿ ಗ್ರಾಮದ ಶಿವಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಐನಾಪುರ ವರದಿ: ಪರಶಿವನನ್ನು ನೆನೆದರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಅರ್ಚಕ ವಿಶ್ವನಾಥ ಜೋಶಿ ಹೇಳಿದ್ದಾರೆ. ಶುಕ್ರವಾರ ಶಿವರಾತ್ರಿ ಪ್ರಯುಕ್ತ ಪಟ್ಟಣದ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು. ಶ್ರೀರಂಗ ಜೋಶಿ, ಗುರುರಾಜ ಕುಲಕರ್ಣಿ ಪೂಜಾ ಕೈಂಕರ್ಯಕ್ಕೆ ಸಾಥ್ ನೀಡಿದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕುಡಚಿ ವಿಶ್ವನಾಥ, ನಾಮದಾರ, ಅನಿಲ, ಶಂಕರ, ಶಿವಪ್ರಸಾದ, ಚಿದಾನಂದ, ಶೀತಲ ಬಾಲೋಜಿ, ಕೇಶವ ರಡ್ಡಿ, ಮುತ್ತಪ್ಪ ಮಗದುಮ್ಮ, ಗುರುರಾಜ ಕಾಲತಿಪ್ಪಿ, ಪ್ರಕಾಶ ಮಗದುಮ್ಮ, ಬಸವರಾಜ ಮಡಿವಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts