More

    ಪ್ರಧಾನಿ ನರೇಂದ್ರ ಮೋದಿ ಕಾರ್ಯ ವಿಶ್ವಕ್ಕೆ ಮಾದರಿ

    ಅಥಣಿ ಗ್ರಾಮೀಣ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯ ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಸಿದ್ಧಪ್ಪ ಮುದಕಣ್ಣವರ ಹೇಳಿದರು. ಅಥಣಿ ತಾಲೂಕಿನ ಖೋತನಟ್ಟಿ ಗ್ರಾಮದ ವಿಠ್ಠಲ-ರುಕ್ಮೀಣಿ ದೇವಸ್ಥಾನಕ್ಕೆ ಸಂಸದ ಅಣ್ಣಸಾಹೇಬ ಜೊಲ್ಲೆ ಅವರ 5 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ವಿದೇಶಾಂಗ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆ ತಂದು ವಿಶ್ವವೇ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು. ಮುಖಂಡರಾದ ಶಿವಾಜಿ ಭೋಸಲೆ, ಉಮೇಶ ಮುರಗ್ಯಾಗೋಳ, ಸಂಜಯ ಶಿಂಧೆ, ಪಿಂಟು ಕದಂ, ರಘುನಾಥ ಭೋಸಲೆ, ಬಂಡು ಚವ್ಹಾಣ, ಅನಿಲ ಮೋರೆ, ನಾನಾ ಖೋತ, ರಾವಸಾಬ ನೇಮಗೌಡ, ಅಜಯ ಮೋರೆ, ರಮೇಶ ಭೋಸಲೆ, ರಮೇಶ ಮುರಗ್ಯಾಗೋಳ, ಮಾರುತಿ ಕದಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts