More

  ಭಕ್ತಿಮಾರ್ಗದಿಂದ ಬದುಕು ಹಸನು: ಬಿ.ವೈ.ರಾಘವೇಂದ್ರ

  ಶಿಕಾರಿಪುರ: ಭಕ್ತಿಮಾರ್ಗದಿಂದ ಬದುಕು ಹಸನಾಗುತ್ತದೆ. ಧರ್ಮ ಮಾರ್ಗದಿಂದ ಜೀವನ ಆನಂದಮಯವಾಗಿರುತ್ತದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸು ಹಗುರವಾಗುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

  ಶಿವಗಿರಿ ಮಹಸಂಸ್ಥಾನ ಮಠದ ಶ್ರೀ ಶಿವಗಿರಿ ಮರಾಠ ಸಮಾಜ ಹಾಗೂ ಶ್ರೀ ಶಿವಗಿರಿಸ್ವಾಮಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಎಸ್.ಎಸ್.ರಸ್ತೆಯಲ್ಲಿ ನಿರ್ಮಿಸಿರುವ ನೂತನ ಶ್ರೀ ಭವಾನಿ ಶಂಕರ ಹಾಗೂ ತುಳಜಾ ಭವಾನಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಮಠ-ಮಂದಿರಗಳು ನಮ್ಮ ಶ್ರದ್ಧಾಕೇಂದ್ರಗಳು. ಅವುಗಳು ಈ ಮಣ್ಣಿನ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಭವ್ಯತೆಯ ಸಂಕೇತ. ನಮ್ಮ ಪರಂಪರೆ, ಆಚಾರ, ವಿಚಾರಗಳ ಸಂಕೇತವಾಗಿವೆ. ಭಾರತ ಜಗತ್ತಿನ ಆಗಸದಲ್ಲಿ ಪ್ರಕಾಶಿಸಲು ಕಾರಣ ಇಲ್ಲಿನ ಆಧ್ಯಾತ್ಮಿಕ ಶಕ್ತಿ. ಇಂತಹ ಶ್ರೇಷ್ಠ ಮಣ್ಣಿನ ವಾರಸುದಾರರು ಎಂಬ ಹಿರಿಮೆ ನಮ್ಮದು ಎಂದರು.
  ಮರಾಠ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ತನ್ನದೇ ಆದ ಶಿಸ್ತು , ಅನುಶಾಸನವಿದೆ. ಪೌರುಷ ಮತ್ತು ಕ್ಷಾತ್ರ ತೇಜದ ಸಂಗಮವಾಗಿರುವ ಈ ಸಮಾಜ ಅಪ್ಪಟ ದೇಶಭಕ್ತರ ಸಮಾಜ. ಛತ್ರಪತಿ ಶಿವಾಜಿ ಮಹಾರಾಜರು ಈ ಸಮಾಜದ ಕೊಡುಗೆ. ಹಿಂದು ಸಾಮ್ರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮಹಾವೀರ ಶಿವಾಜಿ. ಇಂದಿಗೂ ಈ ಸಮಾಜದ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳ ಪ್ರತೀಕ. ಅತ್ಯಂತ ಸಂಸ್ಕಾರಯುತವಾದ ಸ್ವಾಭಿಮಾನಿ ಸಮಾಜ ಮರಾಠ ಸಮಾಜ ಎಂದು ಬಣ್ಣಿಸಿದರು.
  ವೇದಾಂತಾಚಾರ್ಯ ಶ್ರೀ ಮಂಜುನಾಥ್ ಸ್ವಾಮೀಜಿ, ಶ್ರೀ ಬಸವರಾಜ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶಿವಮೊಗ್ಗ ಶಾಖೆಯ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ದಯಾನಂದ ಗಿರಿ ಸ್ವಾಮೀಜಿ, ಶ್ರೀ ಹನುಮಂತಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
  ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತುಳಜಾಭವಾನಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ್ ಜಗತಾಪ್, ಶಿವಗಿರಿ ಮರಾಠ ಸಮಾಜದ ಅಧ್ಯಕ್ಷ ಶಿವಾಜಿ ರಾವ್, ಶಿವಗಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರೋಜಿರಾವ್, ತುಳಜಾಭವಾನಿ ದೇವಸ್ಥಾನ ಅಧ್ಯಕ್ಷ ಅರ್ಜುನ್ ರಾವ್, ದಾನೋಜಿ ರಾವ್, ಪರಮೇಶ್ವರಪ್ಪ ಮಾಳಗಿ, ಬಿ.ಪಿ.ನಾರಾಯಣ ರಾವ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts