More

    ಹೊಸ ಅನ್ವೇಷಣೆಗಳತ್ತ ತೇಜಸ್ವಿ ಚಿಂತನೆ

    ಶಿವಮೊಗ್ಗ: ನಮ್ಮ ಪರಿಸರದ ಹಲವು ವಿಸ್ಮಯಗಳನ್ನು ಸರಳವಾಗಿ ಓದುಗರಿಗೆ ತಲುಪಿಸಿದ ಪೂರ್ಣಚಂದ್ರ ತೇಜಸ್ವಿ, ಹೊಸ ಅನ್ವೇಷಣೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದರೆಂದು ತೇಜಸ್ವಿ ಸಹೋದರಿ, ಸಾಹಿತಿ ತಾರಿಣಿ ಚಿದಾನಂದ ಗೌಡ ತಿಳಿಸಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಆನ್​ಲೈನ್​ನಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಧಕರ ಸ್ಮರಣೆ ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ-ಸಾಂಸ್ಕೃತಿಕ ಚಿಂತನೆ ಕುರಿತು ಮಾತನಾಡಿ, ಒಂದು ತಲೆಮಾರನ್ನು ಎಚ್ಚರಿಸುವ ಮೂಲಕ ನಮ್ಮ ನೆಲದ ಕೌತುಕವನ್ನು ಪೂರ್ಣಚಂದ್ರ ತೇಜಸ್ವಿ ಸರಳವಾಗಿ ಬರೆದಿದ್ದಾರೆ ಎಂದರು.

    ಬಾಲ್ಯದಲ್ಲಿ ನಮಗೆ ಹಲವು ಪರಿಸರ ವಿಜ್ಞಾನ ಕುರಿತು ಮಾಹಿತಿ ನೀಡುತ್ತಿದ್ದ ತೇಜಸ್ವಿ, ಭೂಮಿ ಮೇಲಿನ ಪ್ರತಿಯೊಂದು ಕಣವೂ ಮತ್ತೊಂದು ಕಣವನ್ನು ಅವಲಂಬಿತವಾಗಿರುತ್ತದೆ ಎಂಬ ವೈಜ್ಞಾನಿಕ ವಾಸ್ತವವನ್ನು ವಿವರಿಸುತ್ತಿದ್ದರು. ಕುವೆಂಪು ಅವರ ಮಂತ್ರ ಮಾಂಗಲ್ಯಕ್ಕೆ ರೂಪ ನೀಡಿದ್ದಲ್ಲದೆ ಜನರು ಹೇಗೆ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಬಹುದು ಎಂಬುದನ್ನು ತಮ್ಮ ಮದುವೆ ಮೂಲಕವೇ ತೋರಿಸಿಕೊಟ್ಟರು. ಅತಿಯಾದ ನಿರೀಕ್ಷೆಗಳಿಲ್ಲದೆ ತಾಳ್ಮೆ, ಸಂಯಮದಿಂದ ಬದುಕಬೇಕು. ಈ ಮನಸ್ಥಿತಿ ಇಲ್ಲದಿದ್ದರೆ ಸಂಪ್ರದಾಯಬದ್ಧ ಮದುವೆಯಾದರೂ ಪ್ರಯೋಜನವಿಲ್ಲ ಎಂಬುದು ತೇಜಸ್ವಿ ಅಭಿಪ್ರಾಯವಾಗಿತ್ತು ಎಂದು ತಿಳಿಸಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತೇಜಸ್ವಿ ವೈಚಾರಿಕತೆ ಕುರಿತು ಸಾಹಿತಿ ಡಾ.ನೆಲ್ಲುಕುಂಟೆ ವೆಂಕಟೇಶ, ಕಿರುಗೂರಿನ ಗಯ್ಯಾಳಿಗಳಲ್ಲಿ ಕಾಣಿಸುವ ಸ್ತ್ರೀಲೋಕ ಕುರಿತು ಅಧ್ಯಾಪಕಿ ಡಾ. ಸಬಿತಾ ಬನ್ನಾಡಿ, ನಾ ಕಂಡಂತೆ ತೇಜಸ್ವಿ ಕುರಿತು ಹಿರಿಯ ಸಾಹಿತಿ ಜಿ.ವಿ.ಸಂಗಮೇಶ್ವರ, ತೇಜಸ್ವಿ ರೂಪಿಸಿದ ಹೊಸ ದಾರಿ ಕುರಿತು ಲೇಖಕ ಡಾ. ಕಲೀಂ ಉಲ್ಲಾ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts