More

    ಕಡಕೋಳದಲ್ಲಿ ಸಾಕ್ಷರತೆ, ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ

    ಸವಣೂರ: ತಾಲೂಕಿನ ಕಡಕೋಳ ಗ್ರಾಮದ ಈಶ್ವರ ದೇವಸ್ಥಾನ ಸಭಾಭವನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಬಾರ್ಡ್ ಹಾವೇರಿ, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ವತಿಯಿಂದ ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕುರಿತು ಶುಕ್ರವಾರ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಬಾರ್ಡ್ ಡಿಡಿಎಂ ಎಸ್. ರಂಗನಾಥ್, ಮನೆ ಮನೆ ಕೆಸಿಸಿ ಅಭಿಯಾನ ಹಾಗೂ ಪಿಎಂಎಫ್​ಎಂಇ ಬೆಳೆ ಸಾಲ ಕುರಿತು ಮಾಹಿತಿ ನೀಡಿದರು.

    ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಮಾರುತಿ ಪ್ರಸಾದ್ ಮಾತನಾಡಿ, ಬ್ಯಾಂಕ್​ನಲ್ಲಿರುವ ಸಾಲಗಳು, ಉಳಿತಾಯಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕುರಿತು ತಿಳಿಸಿದರು.

    ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಹರೀಶ ಹಿರಳ್ಳಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.

    ಬ್ಯಾಂಕ್ ಮಿತ್ರ ಇಸ್ಮಾಯಿಲ್ ಜಾಫರ್ಖಾನ್ನವರ, ಚಂದ್ರಕಾಂತ ಹಳೆಮನೆ, ಎನ್​ಆರ್​ಎಲ್​ಎಂ, ಎಂಬಿಕೆ ಸುಧಾ ಎಂ., ಇತರರಿದ್ದರು. ರತ್ನ ಶಿಶುವಿನಾಳ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts