More

    ಮೇ.27ರಂದು ನಗರದಲ್ಲಿ ಪ್ರಾಂತೀಯ ಸಮ್ಮೇಳನ: ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು ಮಾಹಿತಿ

    ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೇ.27ರಂದು ‘ಆರೋಗ್ಯವೇ ಭಾಗ್ಯ-ಕಾನೂನು ಅರಿವು’ ನಮ್ಮೆಲ್ಲರ ಸಂರಕ್ಷಣೆ ಧ್ಯೇಯ ವಾಕ್ಯದೊಂದಿಗೆ ಪ್ರಾಂತೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರೂ ಆದ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು ತಿಳಿಸಿದರು.
    ಲಯನ್ಸ್ ಸಂಸ್ಥೆ ಸ್ನೇಹ ಮತ್ತು ಸ್ನೇಹವನ್ನು ಧ್ಯೇಯವಾಗಿಟ್ಟುಕೊಂಡು ಅಗತ್ಯವುಳ್ಳವರಿಗಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಇನ್ನು ಸೇವಾ ಕಾರ್ಯ ಮತ್ತು ಆಡಳಿತ ನಡೆಸಲು ಹಲವಾರು ಹುದ್ದೆಗಳನ್ನು ನೀಡಲಾಗಿದೆ. ಹತ್ತು ಕ್ಲಬ್‌ಗಳು ಸೇರಿ ಒಂದು ಪ್ರಾಂತ್ಯವಾಗಿರುತ್ತದೆ. ಪ್ರಾಂತೀಯ ಅಧ್ಯಕ್ಷರು ಇದರ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಾರೆ. ವರ್ಷದ ಕೊನೆಯಲ್ಲಿ ಪ್ರಾಂತೀಯ ಸಮ್ಮೇಳನ ಆಯೋಜಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈ ನಿಟ್ಟಿನಲ್ಲಿ 27ರಂದು ಬೆಳಗ್ಗೆ 9ಗಂಟೆಯಿಂದ ಸಮ್ಮೇಳನ ಪ್ರಾರಂಭವಾಗಲಿದೆ. ಕಲಾತಂಡಗಳ ಮೂಲಕ ಗಣ್ಯರನ್ನು ವೇದಿಕೆಗೆ ಕರೆತರಲಾಗುವುದು. 9ಗಂಟೆಗೆ ಬ್ಯಾನರ್ ಪ್ರದರ್ಶನ, 10ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 11ಕ್ಕೆ ವಿವಿಧ ಕ್ಲಬ್‌ಗಳಿಂದ ರೋಗಿಗಳಿಗೆ ಧನಸಹಾಯ, ಹೊಲಿಗೆ ಯಂತ್ರ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸೇವಾ ಚಟುವಟಿಕೆ ನಡೆಯಲಿವೆ ಎಂದು ವಿವರಿಸಿದರು.
    ಬೆಳಗ್ಗೆ 11.30ಕ್ಕೆ ಸಮ್ಮೇಳನವನ್ನು ರಾಜ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಕಾನೂನು ಅರಿವು ಕುರಿತು ಹಾಗೂ ಮೈಸೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ.ಕೆ.ಎಸ್.ಸದಾನಂದ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು ವಹಿಸಲಿದ್ದಾರೆ ಎಂದು ಹೇಳಿದರು.
    ಪ್ರಾಂತ್ಯ-9ರ ಅಧ್ಯಕ್ಷೆ ಡಾ.ವೈ.ಎಚ್.ರತ್ನಮ್ಮ, ಪ್ರಾಂತ್ಯ-10ರ ಅಧ್ಯಕ್ಷ ಅಪ್ಪಾಜಿ, ಪ್ರಾಂತ್ಯ-11ರ ಅಧ್ಯಕ್ಷ ಎಚ್.ಆರ್.ಪದ್ಮನಾಭ, ಆತಿಥೇಯ ಸಮಿತಿಯ ಸಹಕಾರ್ಯದರ್ಶಿ ಕೆ.ಆರ್.ಶಶಿಧರ್ ಈಚಗೆರೆ, ಪ್ರಾಂತ್ಯ-9 ವಲಯ-1ರ ಅಧ್ಯಕ್ಷ ಎಂ.ಕೆ.ಪ್ರಶಾಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts