More

    ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲೆ

    ಸಾಗರ: ಶಾಲೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವ ಕೇಂದ್ರಗಳಾಗಿವೆ ಎಂದು ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಆರ್.ವಿನಯ್ ಹೇಳಿದರು.

    ಲಯನ್ಸ್ ಸಂಸ್ಥೆಯ ಗ್ರಾಮ ದತ್ತು ಸ್ವೀಕಾರ ಯೋಜನೆಯಡಿ ತಾಲೂಕಿನ ಗುಡ್ಡೆಆಲಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಶಿಕ್ಷಣದ ಅಭಿವೃದ್ಧಿ ಹೆಚ್ಚು ಒತ್ತು ನೀಡುತ್ತಿವೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಲಯನ್ಸ್ ಸಂಸ್ಥೆ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದೆ. ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿ ಜತೆಗೆ ಅಲ್ಲಿನ ಶಾಲೆಗಳಿಗೆ ಅಗತ್ಯ ಕಲಿಕೋಪಕರಣ, ಪೀಠೋಪಕರಣ ನೀಡುವ ಕೆಲಸವನ್ನು ಲಯನ್ಸ್ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.

    ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಲಯನ್ಸ್ ಸಂಸ್ಥೆಯಿಂದ ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞೆ ಬೋಧಿಸಲಾಯಿತು. ಎಸ್​ಡಿಎಂಸಿ ಅಧ್ಯಕ್ಷ ಹೊಳೆಯಪ್ಪ, ಮುಖ್ಯ ಶಿಕ್ಷಕಿ ಪಿ.ವೀಣಾ, ಶಿಕ್ಷಣ ಇಲಾಖೆಯ ಅಜಯ್, ಲಯನ್ಸ್ ಸಂಸ್ಥೆಯ ಮೇಜರ್ ನಾಗರಾಜ್, ಎಸ್.ಬಿ.ಮಹದೇವ್, ಸರಸ್ವತಿ ನಾಗರಾಜ್, ಸಿದ್ದೇಶ್ವರ ಪ್ರಸಾದ್, ಚಂದ್ರಹಾಸ್ ಶೇಟ್, ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts