More

    ಹರ ಮುನಿದರೆ ಗುರು ಕಾಯುವ

    ಅಮರೇಶ್ವರದ ಅಭಿನವ ಗುರುಗಜದಂಡ ಶಿವಾಚಾರ್ಯರು ಅಭಿಮತ

    ಲಿಂಗಸುಗೂರು: ‘ಹರ ಮುನಿದರೆ ಗುರು ಕಾಯುವ’ ಎಂಬ ಉಕ್ತಿಯಂತೆ ಗುರುವಿಲ್ಲದೇ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅಮರೇಶ್ವರದ ಅಭಿನವ ಗುರುಗಜದಂಡ ಶಿವಾಚಾರ್ಯರು ಹೇಳಿದರು.

    ತಾಲೂಕಿನ ದೇವರಭೂಪುರ ಬೃಹನ್ಮಠದಲ್ಲಿ ಭಾನುವಾರ ಗುರುಪೂರ್ಣಿಮೆ ನಿಮಿತ್ತ ಆಶೀರ್ವಚನ ನೀಡಿದರು. ಮನುಷ್ಯ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಋಷಿಗಳು, ಮುನಿಗಳು, ಆಚಾರ್ಯರು, ಮಠಾಧೀಶರು ಶಿಷ್ಯರಿಗೆ ದೀಕ್ಷಾ ಸಂಸ್ಕಾರ, ಅಕ್ಷರಭ್ಯಾಸ ಕರುಣಿಸಿ ಜೀವನ ಮೌಲ್ಯ ಉಣ ಬಡಿಸುತ್ತ ಬಂದಿದ್ದಾರೆ. ತಮಸೋಮಾ ಜ್ಯೋತಿರ್ಗಮಯ ಎಂಬ ವಾಣಿಯಂತೆ ಅಜ್ಞಾನವೆಂಬ ಅಂಧಃಕಾರ ತೊಲಗಿಸಿ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು ಎಂದರು.

    ಶ್ರೀಮಠಕ್ಕೆ ಆಗಮಿಸಿದ ಭಕ್ತ ವೃಂದಕ್ಕೆ ಜಗದ್ಗುರು ಪಂಚಾಚಾರ್ಯರು ಹಾಗೂ ಲಿಂ.ಗಜದಂಡ ಶಿವಾಚಾರ್ಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts