More

    ಶಿರಡಿ ಸಾಯಿಮಂದಿರದಲ್ಲಿ ಗುರುಪೂರ್ಣಿಮೆ ಉತ್ಸವ

    ಮಹಾಲಿಂಗಪುರ: ಗುರುಪೂರ್ಣಿಮೆ ನಿಮಿತ್ತ ಪಟ್ಟಣದ ಲಕ್ಷ್ಮಿನಗರ(ಕೆಂಗೇರಿಮಡ್ಡಿ)ದ ಸಾಯಿ ಮಂದಿರದಲ್ಲಿ ಸೋಮವಾರ ಸಂಭ್ರಮದಿಂದ ಗುರುಪೂರ್ಣಿಮೆ ಆಚರಿಸಲಾಯಿತು.

    ಬೆಳಗ್ಗೆ ಅಭಿಷೇಕ, ಮಹಾಪೂಜೆ ನೆರವೇರಿಸಲಾಯಿತು. 10 ಗಂಟೆಗೆ ಮಹಿಳೆಯರ ಆರತಿ ಮತ್ತು ಡೊಳ್ಳು ಮೇಳದೊಂದಿಗೆ ಲಕ್ಷ್ಮಿನಗರದ ವಿವಿಧ ರಸ್ತೆಗಳಲ್ಲಿ ಸಾಯಿಬಾಬಾ ಅವರ ಪಲ್ಲಕ್ಕಿ ಉತ್ಸವ ನಡೆಯಿತು.

    ಮಧ್ಯಾಹ್ನ 12ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ ಮಾಡಲಾಯಿತು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಹಾಲಿಂಗಪುರ, ರಬಕವಿ-ಬನಹಟ್ಟಿ, ಸಮೀರವಾಡಿ, ಚಿಮ್ಮಡ, ಬೆಳಗಲಿ ಸೇರಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

    ಅರ್ಚಕ ಮಹಾಲಿಂಗ ಮರೆಗೊಂಡ, ಸಿಂಧೂರ ಮರೆಗೊಂಡ, ಚಂದ್ರಕಾಂತ ಬೀಳಗಿ, ಮಹಾದೇವ ಪುಕಾಳೆ, ಶಂಭುಲಿಂಗ ಬಡಿಗೇರ, ವಿಠ್ಠಲ ಕುಳಲಿ, ಸಿದ್ದಣ್ಣ ರಾಮೋಜಿ, ವಿಠ್ಠಲ ಮರೆಗೊಂಡ, ರಾಜು ಕುಕ್ಕುಗೋಳ, ರಮೇಶ ಮರೆಗುದ್ದಿ, ರಾಜು ಮೂಲಿಮನಿ, ಮಹಾಂತೇಶ ಶಿವಣಗಿ, ಗಣೇಶ ಕುರಬೇಟ, ಸಂತೋಷ ದೇವರಮನಿ ಇತರರಿದ್ದರು.

    ವಿವಿಧ ದೇವಸ್ಥಾನಗಳಲ್ಲಿ ಪೂಜೆ
    ಗುರುಪೂರ್ಣಿಮೆ ನಿಮಿತ್ತ ಪಟ್ಟಣದ ಮಾಹಾಲಿಂಗೇಶ್ವರ ದೇವಸ್ಥಾನ, ಸಿದ್ಧಾರೂಢ ಆಶ್ರಮ, ರಾಘವೇಂದ್ರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗುರುಪೂರ್ಣಿಮೆ ನಿಮಿತ್ತ ಹಲವು ಭಕ್ತರು ಮಹಾಲಿಂಗೇಶ್ವರ ಪೀಠಾಧಿಪತಿ ಮಹಾಲಿಂಗೇಶ್ವರ ಶ್ರೀಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts