ಭಕ್ತರ ದರ್ಶನಕ್ಕೆ ಗುರುರಾಯರ ಮೂರ್ತಿ

0 Min Read
ಭಕ್ತರ ದರ್ಶನಕ್ಕೆ ಗುರುರಾಯರ ಮೂರ್ತಿ
ಲಿಂಗಸುಗೂರಿನಲ್ಲಿ ಗುರುರಾಯರ ಮೂರ್ತಿಯನ್ನು ಭಕ್ತರ ಮನೆಗೆ ತೆಗೆದುಕೊಂಡು ಹೋಗಿ ಬುಧವಾರ ದರ್ಶನಾಶೀರ್ವಾದ ಕಲ್ಪಿಸಲಾಯಿತು.

ಲಿಂಗಸುಗೂರು: ರಾಘವೇಂದ್ರ ಸ್ವಾಮಿಗಳ 351 ನೇ ಆರಾಧನಾ ಮಹೋತ್ಸವ ನಿಮಿತ್ತ ಪಟ್ಟಣದ ರಾಘವೇಂದ್ರಸ್ವಾಮಿ ಮಠದಿಂದ ಗುರುರಾಯರ ಮೂರ್ತಿಯೊಂದಿಗೆ ಭಕ್ತರ ಮನೆಗೆ ತೆರಳಿ ಬುಧವಾರ ದರ್ಶನಾಶೀರ್ವಾದ ಕಲ್ಪಿಸಲಾಯಿತು. ಜು.31 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ರಾಯರ ಆರಾಧನಾ ಮಹೋತ್ಸವಕ್ಕೆ ಆಮಂತ್ರಣ ನೀಡಲಾಗುತ್ತಿದೆ.

ಪಟ್ಟಣದ ಭಕ್ತರು ಮನೆಗೆ ಆಗಮಿಸಿದ ಗುರುರಾಯರ ಮೂರ್ತಿಗೆ ಪೂಜೆ ಸಲ್ಲಿಸಿ ಗುರುದಕ್ಷಿಣೆ ನೀಡಿ ಬೀಳ್ಕೊಟ್ಟರು. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆ.12 ರಿಂದ 14 ರವರೆಗೆ ನಡೆಯಲಿದೆ. ಮಠದ ವ್ಯವಸ್ಥಾಪಕ ಪ್ರಶಾಂತಾಚಾರ್ಯ, ಅರ್ಚಕ ರಂಗಾಚಾರ್ಯ, ಸಿಬ್ಬಂದಿ ಶೇಷಗಿರಿದಾಸ, ಹನುಮೇಶ ದಾಸ, ಶ್ರೀಹರಿ, ಶ್ರೀಕಾಂತ ಜೋಷಿ ಗೋತಗಿ ಇದ್ದರು.

See also  ಆಲಂಗಳ ಮುಂದೆ ಅಪ್ಪು ಭಾವಚಿತ್ರ ಪ್ರದರ್ಶನ
Share This Article