More

    ಹಿಂಗಾರು ಬಿತ್ತನೆಗೆ ಬೀಜ-ರಸಗೊಬ್ಬರ ಕೊರತೆಯಾಗದಂತೆ ಕ್ರಮ

    ಲಿಂಗಸುಗೂರು: ತಾಲೂಕಿನಾದ್ಯಂತ ಉತ್ತಮ ಮಳೆ ಸುರಿದಿದ್ದು, ಹಿಂಗಾರು ಬಿತ್ತನೆಗಾಗಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

    ಮಂಗಳವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕಡಲೆ ಬಿತ್ತನೆ ಬೀಜ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಸುರಿಯದೆ ಬರಗಾಲ ಆವರಿಸಿ ರೈತರು ತೀವ್ರ ಸಂಕಷ್ಟ ಎದುರಿಸುವಂತಾಯಿತು.

    ಸರ್ಕಾರ ಕೂಡ ತಾಲೂಕನ್ನು ಬರಪೀಡಿತವೆಂದು ಘೋಷಿಸಿದೆ. ಇದೀಗ ಹಿಂಗಾರು ಬಿತ್ತನೆಗೆ ಉತ್ತಮ ಮಳೆ ಸುರಿದಿದೆ. ಜಮೀನು ತೇವಾಂಶವಿರುವ ವೇಳೆಯೇ ಬಿತ್ತನೆಗೆ ಮುಂದಾಗಬೇಕು. ರೈತರ ಬೇಡಿಕೆ ಅನುಸಾರ ಕಡಲೆ ಮತ್ತು ಜೋಳ ಬಿತ್ತನೆ ಬೀಜ ಕೊರತೆಯಾಗದಂತೆ ನಿಗವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

    ಕೃಷಿ ಇಲಾಖೆ ಪ್ರಭಾರಿ ಇಡಿ ಅಮರೇಗೌಡ ಮಾತನಾಡಿ, ರೈತರು ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ನಿಯಮಾನುಸಾರ ಐದು ಎಕರೆವರೆಗೆ ಹೊಂದಿದ್ದ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು.

    20 ಕೇಜಿ ತೂಕದ ಕಡಲೆ ಪಾಕೀಟು ಸಾಮಾನ್ಯ ರೈತರಿಗೆ 1,200ರೂ. ಮತ್ತು ಎಸ್ಸಿ, ಎಸ್ಟಿ ರೈತರಿಗೆ 950 ರೂ.ಗೆ ವಿತರಿಸಲಾಗುವುದು. ಅದರಂತೆ ಜೋಳ 3 ಕೇಜಿ ಪಾಕೀಟು ಸಾಮಾನ್ಯ ರೈತರಿಗೆ 204 ರೂ. ಮತ್ತು ಎಸ್ಸಿ, ಎಸ್ಟಿ ರೈತರಿಗೆ 174 ರೂ.ಗೆ ವಿತರಿಸಲಾಗುವುದೆಂದು ತಿಳಿಸಿದರು.

    ರೈತ ಸಂಪರ್ಕ ಕೇಂದ್ರ ಅಧಿಕಾರಿ ಸಿದ್ಧಪ್ಪ ಬಾಚಿಹಾಳ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ವೆಂಕನಗೌಡ ಐದನಾಳ, ರಾಜು ತಂಬಾಕೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts