More

    ಭವಿಷ್ಯ ರೂಪಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ ತಳಹದಿ

    ಲಿಂಗಸುಗೂರು: ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಂಡು ದೇಶದ ಸತ್ಪ್ರಜೆಯಾಗಿ ಗುರುತಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ ತಳಹದಿ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.

    ಪಟ್ಟಣದ ಜಿಟಿಟಿಸಿ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಗುರುವಾರ ಆಯೋಜಿಸಿದ್ದ 2022ರ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿಬ್ಬಂದಿಗಳ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿ, ಕಳೆದೆರಡು ವರ್ಷಗಳಿಂದ ಕರೊನಾ ಮಹಾಮಾರಿ ಭೀತಿಯಿಂದ ಭೌತಿಕ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ತೊಂದರೆ ಎದುರಿಸಬೇಕಾಯಿತು. ಇದೀಗ ಪರೀಕ್ಷೆ ನಡೆಸಲು ಅವಕಾಶ ಒದಗಿಬಂದಿದೆ ಎಂದರು.

    ಲಿಂಗಸುಗೂರು ತಾಲೂಕು ಫಲಿತಾಂಶದಲ್ಲಿ ಪ್ರತಿಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುತ್ತಿದ್ದು, ಈ ಬಾರಿಯೂ ಶೇ.100 ಫಲಿತಾಂಶ ದೊರೆಯಲಿದೆ ಎಂಬ ವಿಶ್ವಾಸವಿದೆ. ಖಾಸಗಿ ಶಾಲೆಗಳು ನಾಚುವಂತೆ ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು.

    ಬಿಇಒ ಹುಂಬಣ್ಣ ರಾಥೋಡ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾ.28 ರಿಂದ ಏ.11 ರವರೆಗೆ ನಡೆಯಲಿದ್ದು, ಪರೀಕ್ಷೆ ಯಶಸ್ವಿಗೆ ಈಗಾಗಲೇ ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಲಿಂಗಸುಗೂರು ಮತ್ತು ಮಸ್ಕಿ ತಾಲೂಕುಗಳು ಸೇರಿ ಒಟ್ಟು 27 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

    ಈ ಬಾರಿ 6028 ವಿದ್ಯಾರ್ಥಿಗಳು (ಸಿಸಿಇಆರ್‌ಎಫ್), 16 ಪುನರಾವರ್ತಿತ ವಿದ್ಯಾರ್ಥಿಗಳು (ಸಿಸಿಇಆರ್‌ಆರ್), 381 ಖಾಸಗಿ (ಸಿಸಿಇಪಿಎಫ್), 13 ಪುನರಾವರ್ತಿತ ಖಾಸಗಿ (ಸಿಸಿಇಪಿಆರ್) ಮತ್ತು 2 ಎನ್‌ಎಸ್‌ಪಿಆರ್ ಸೇರಿ ಒಟ್ಟು ಪರೀಕ್ಷೆಗೆ 6,440 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆಂದು ಮಾಹಿತಿ ನೀಡಿದರು.

    ಪರೀಕ್ಷೆ ಸುಗಮ ಮತ್ತು ಶಾಂತಿಯುತವಾಗಿ ನಡೆಸಲು 27 ಸ್ಥಿರ ಜಾಗೃತ ಅಧಿಕಾರಿಗಳು, 3 ವಿಚಕ್ಷಣಾ ಜಾಗೃದ ದಳ, 9 ಮಾರ್ಗಾಧಿಕಾರಿಗಳು, 27 ಮೊಬೈಲ್ ಸ್ವಾಧೀನಾಧಿಕಾರಿಗಳು, 350 ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.

    ತಹಸೀಲ್ದಾರ್ ಬಲರಾಮ್ ಕಟ್ಟಿಮನಿ, ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಉಪಾಧ್ಯಕ್ಷ ಎಂ.ಡಿ.ರಫೀ, ಟಿಎಂಸಿ ಸಿಒ ನರಸಪ್ಪ ತಹಸೀಲ್ದಾರ್, ಪ್ರಾಚಾರ್ಯರಾದ ಸಾಬಣ್ಣ ವಗ್ಗರ್, ರಾಜಕುಮಾರ, ಬಸಪ್ಪ ಮಸ್ಕಿ, ಆರೋಗ್ಯ ಇಲಾಖೆಯ ಡಾ.ಸೂಗೂರೇಶ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts