More

    ಮಠಗಳಲ್ಲಿ ಚೈತನ್ಯವಿದ್ದರೆ ಭಕ್ತರು ಸಮೃದ್ಧ; ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಶಿವಾಚಾರ್ಯರ ಅನಿಸಿಕೆ

    ಲಿಂಗಸುಗೂರು: ಭಾರತೀಯ ಪರಂಪರೆ, ಸಂಪ್ರದಾಯದಲ್ಲಿ ದೇವಾಲಯ, ಮಠ-ಮಾನ್ಯಗಳು ಶ್ರದ್ಧಾಭಕ್ತಿಯ ಕೇಂದ್ರಗಳಾಗಿದ್ದು, ಮಠ-ಮಾನ್ಯಗಳಲ್ಲಿ ಚೈತನ್ಯ ಶಕ್ತಿಯಿದ್ದರೆ ಭಕ್ತ ಸಂಕುಲ ಸಮೃದ್ಧ ಬದುಕು ಸಾಗಿಸಲು ಸಾಧ್ಯವೆಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಶಿವಾಚಾರ್ಯರು ಹೇಳಿದರು.

    ತಾಲೂಕಿನ ದೇವರಭೂಪುರ ನೂತನ ಬೃಹನ್ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಜ್ಞ, ಹೋಮ-ಹವನ, ಪೂಜಾ ಕೈಂಕರ್ಯಗಳ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವಾಲಯ, ಅರಮನೆ ಶಿಥಿಲಾವಸ್ಥೆ, ಮಹಿಳೆಯರಿಗೆ ಅವಮಾನ, ವೃಕ್ಷಗಳ ಮತ್ತು ಕೆರೆ-ಕಟ್ಟೆಗಳ ನಾಶ, ಗುರು, ಲಿಂಗ, ಜಂಗಮ, ಬ್ರಾಹ್ಮಣರಿಗೆ ಅವಮಾನವನ್ನು ಬಿಂಬ ಎಂದು ಕರೆಯಲಾಗುತ್ತದೆ. ಇದರಿಂದ ಪ್ರಜೆಗಳು ತೊಂದರೆ ಅನುಭವಿಸುತ್ತಾರೆ. ಬಿಂಬ ಸರಿಯಾಗಿದ್ದರೆ ಆ ಪ್ರಾಂತ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ ಹೊಂದಲು ಸಾಧ್ಯ ಎಂದು ನುಡಿದರು.

    ಭಕ್ತರಲ್ಲಿನ ಭಕ್ತಿಯ ಶಕ್ತಿಯಿಂದ ಗುರುವಿನಲ್ಲಿ ಶಕ್ತಿ ಆವಿಷ್ಕಾರಗೊಳ್ಳಲಿದ್ದು, ಭಕ್ತ ಮತ್ತು ಗುರುವಿನಲ್ಲಿ ಅಂತರ ಏರ್ಪಟ್ಟರೆ ಮಠಗಳು ಕುಂದುತ್ತವೆ. ದೇವರಭೂಪುರ ಬೃಹನ್ಮಠಕ್ಕೆ ಶತಮಾನಗಳ ಇತಿಹಾಸವಿದ್ದು, ಲಿಂಗೈಕ್ಯ ಗುರುಗಳ ಕೃಪಾಶೀರ್ವಾದದಿಂದ ಅಮರೇಶ್ವರ ಅಭಿನವ ಗುರುಗಜದಂಡ ಶಿವಾಚಾರ್ಯರ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ಸಮಾಗಮದಿಂದ ಸುಸಜ್ಜಿತ ನೂತನ ಬೃಹನ್ಮಠ ಉಜ್ವಲ ಸ್ಥಿತಿಗೆ ತಂದಿದ್ದಾರೆ ಎಂದರು.

    ಭಾರತೀಯ ಪರಂಪರೆ ಮತ್ತು ಸಂಸ್ಕೃತಿ ವೈಜ್ಞಾನಿಕತೆಯಿಂದ ಕೂಡಿದ್ದು, ಸಂಪ್ರದಾಯಬದ್ಧ ಧಾರ್ಮಿಕ ಕೈಂಕರ್ಯಗಳು ದೇವಾಲಯ, ಮಠ-ಮಾನ್ಯಗಳಲ್ಲಿ ನಡೆಯುತ್ತ ಬರುತ್ತಿವೆ. ಮನೆ ಕೌಟುಂಬಿಕ ಭೋಗ ವಸ್ತುಗಳನ್ನು ರಕ್ಷಿಸಿದರೆ, ಮಠ-ಮಾನ್ಯಗಳು ವಿಶ್ವಕುಟುಂಬ ಮತ್ತು ಭಕ್ತರ ಪುಣ್ಯ ಫಲಗಳನ್ನು ರಕ್ಷಣೆ ಮಾಡುತ್ತವೆ ಎಂದು ಡಾ.ಮರುಳಸಿದ್ಧ ಶಿವಾಚಾರ್ಯರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts