More

    ಜನದಟ್ಟಣೆಯ ಪ್ರದೇಶಗಳಿಗೆ ಸ್ಯಾನಿಟೈಸೇಷನ್

    ಲಿಂಗಸುಗೂರು: ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವುದರಿಂದ ಜನಸಂದಣಿ ಸೇರುವ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಹಾಗೂ ಅಗ್ನಿ ಶಾಮಕ ಇಲಾಖೆ ಸೇರಿ ಮಂಗಳವಾರ ಸ್ಯಾನಿಟೈಜೇಷನ್ ಮಾಡಲಾಯಿತು.

    ಜನತಾ ಕರ್ಫ್ಯೂ ಘೋಷಣೆಯಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮೆಟಲ್ ಸ್ಟೋರ್, ಬಟ್ಟೆ ಅಂಗಡಿ, ತರಕಾರಿ, ಕಿರಾಣಿ, ಸ್ಟೇಷನರಿ, ಹಾರ್ಡವೇರ್, ಎಲೆಕ್ಟ್ರಿಕಲ್, ಪಾದರಕ್ಷೆ ಮತ್ತಿತರ ಅಂಗಡಿಗಳ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸಂಜೆ 6 ಗಂಟೆವರೆಗೆ ತಳ್ಳುಬಂಡಿ, ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ಜನದಟ್ಟಣೆ ಏರ್ಪಡುತ್ತಿದೆ. ಈ ವೇಳ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಬಸ್ ನಿಲ್ದಾಣ ವೃತ್ತ, ಸ.ಪ.ಪೂ.ಕಾಲೇಜು, ಗಡಿಯಾರ ಚೌಕ್, ಬಸವಸಾಗರ ಕ್ರಾಸ್, ಸಂತೆ ಬಜಾರ್ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts