More

    ಬೆಂಚಲದೊಡ್ಡಿಗೆ ನಿರಂತರ ವಿದ್ಯುತ್ ಪೂರೈಸಿ

    ಜೆಸ್ಕಾಂ ಎಇಇಗೆ ಗ್ರಾಮಸ್ಥರು, ಶಾಲಾ ಮಕ್ಕಳ ಮನವಿ

    ಲಿಂಗಸುಗೂರು: ತಾಲೂಕಿನ ಬೆಂಚಲದೊಡ್ಡಿ ಗ್ರಾಮಕ್ಕೆ ನಿರಂತರ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳರಿಗೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಸೋಮವಾರ ಮನವಿ ಸಲ್ಲಿಸಿದರು.

    ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಕಳೆದ ಸುಮಾರು ಒಂಭತ್ತು ತಿಂಗಳಿಂದ ರಾತ್ರಿ ಹೊತ್ತು ವಿದ್ಯುತ್ ಕಡಿತಗೊಳಿಸಿ ಬೆಳಗ್ಗೆ 7ಕ್ಕೆ ನೀಡಲಾಗುತ್ತಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದು, ರಾತ್ರಿ ಹೊತ್ತು ವಿದ್ಯುತ್ ತೆಗೆಯುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಸದರಿ ಗ್ರಾಮ ರಾತ್ರಿ ವೇಳೆ ವಿಷ ಜಂತುಗಳ ಭೀತಿಯಲ್ಲಿ ಜನರು ವಾಸಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಜೆಸ್ಕಾಂ ಸಿಬ್ಬಂದಿಗೆ ಮನವಿ ಮಾಡಿದರೂ ಗಮನ ಹರಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರಾತ್ರಿ ಹೊತ್ತು ನಿರಂತರ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಷಾ, ಶಿವರಾಜ ನಾಯಕ, ಚಂದ್ರು ನಾಯಕ, ಅಜೀಜ್ ಪಾಶಾ, ಜಮೀರ್ ಖಾನ್, ಸಿದ್ಧಣ್ಣ ದಳಪತಿ, ಹನುಮಂತ ಬಡಿಗೇರ, ಭೀಮನಗೌಡ, ಯಂಕಪ್ಪ, ಜಟ್ಟೆಪ್ಪ ದ್ಯಾಪುರ, ಅಮರಪ್ಪ, ನಂದಪ್ಪ, ಶಿವಣ್ಣ, ಅಯ್ಯಪ್ಪ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts