More

    ಲಿಂಗರಾಜರ ತ್ಯಾಗ ಅನುಕರಣೀಯ

    ನಿಪ್ಪಾಣಿ: ತಲೆಮಾರುಗಳಿಗೆ ಅಭಯ ಹಸ್ತ ನೀಡಿ ನೊಂದವರ ಬದುಕಿನಲ್ಲಿ ಧೈರ್ಯ ತುಂಬಿದ ಶಿರಸಂಗಿ ಲಿಂಗರಾಜರ ತ್ಯಾಗ ಅನುಕರಣೀಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಜಿ.ಕೆಂಪಣ್ಣವರ ಹೇಳಿದರು.

    ಕೆಎಲ್‌ಇ ಸಂಸ್ಥೆಯ ಸ್ಥಳೀಯ ಎಲ್ಲ ಅಂಗಸಂಸ್ಥೆಗಳ ಸಹಯೋಗದಲ್ಲಿ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಶಿರಸಂಗಿ ಲಿಂಗರಾಜರ 163ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಲಿಂಗರಾಜ ದೇಸಾಯಿ ಅವರು ಸಂಸ್ಥಾನಿಕರಾಗಿದ್ದರೂ, ಸಂಸಾರಿಗಳಾಗಿದ್ದರೂ ಸನ್ಯಾಸಿಗಳಂತೆ ಬಾಳಿದವರು. ಸ್ಥಿರಾಸ್ತಿ, ಚರಾಸ್ತಿಯನ್ನು ಶಿಕ್ಷಣಕ್ಕಾಗಿ, ನಾಡಿನ ವಿವಿಧ ಅಭಿವೃದ್ಧಿಗಾಗಿ ಬರೆದಿಟ್ಟು ಜನಮಾನಸದಲ್ಲಿ ಚಿರಾಯುಗಳಾಗಿದ್ದಾರೆ ಎಂದರು.

    ಲಿಂಗರಾಜರ ಭಾವಚಿತ್ರಕ್ಕೆ ಗೌರವ ಅತಿಥಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಮತ್ತು ಗಣ್ಯರು ಪುಷ್ಪಾರ್ಪಣೆಗೈದರು. ಪ್ರಾಚಾರ್ಯ ಡಾ.ಎಂ.ಎಂ. ಹುರಳಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಆಂಗ್ಲ ಮಾಧ್ಯಮಿಕ ಶಾಲೆಯ ಪ್ರಾಚಾರ್ಯ ಪಿ.ಐ.ಪಾಟೀಲ, ಬಿ.ಇಡಿ ಪ್ರಾಚಾರ್ಯ ಡಾ.ಬಿ.ಬಿ.ಪೊಲೀಸ್‌ಪಾಟೀಲ, ರವೀಂದ್ರ ಶೆಟ್ಟಿ, ಸ್ಥಳೀಯ ಅಂಗಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು. ಕನ್ನಡ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಚ್.ಪರಮಾನಟ್ಟಿ ಸ್ವಾಗತಿಸಿದರು. ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಮೋದ ಗಡಾದ ಅತಿಥಿಗಳನ್ನು ಪರಿಚಯಿಸಿದರು. ಸ್ವತಂತ್ರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ರವಿ ಪೂಜಾರಿ ವಂದಿಸಿದರು. ನಮಿತಾ ನಾಯಿಕ ಮತ್ತು ಗೀತಾ ಕಮತೆ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts