More

  ಯೋಧರ ತ್ಯಾಗ, ಬಲಿದಾನ ಸ್ಮರಿಸಲಿ

  ನೇಸರಗಿ: ಸೈನಿಕರ ತ್ಯಾಗ, ಬಲಿದಾನ ಸ್ಮರಿಸುವುದು ಅಗತ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಸಮೀಪದ ಮಲ್ಲಾಪುರ ಕೆಎನ್ ಗ್ರಾಮದ ಗಾಳೇಶ್ವರ ಮಠದಲ್ಲಿ ಭಾನುವಾರ ಮಾಜಿ ಸೈನಿಕರ ಕಲ್ಯಾಣ ಸಂಘ ಉದ್ಘಾಟಿಸಿ ಮಾತನಾಡಿದರು.

  ಯೋಧರು ಪ್ರಾಣ ಲೆಕ್ಕಿಸದೆ ಸೇವೆಯಲ್ಲಿ ತೊಡಗಿ ದೇಶ ರಕ್ಷಿಸುತ್ತಿದ್ದಾರೆ. ಗ್ರಾಮೀಣ ಯುವಕರಿಗೆ ಸೇನೆ ಸೇರಲು ಉತ್ತಮ ತರಬೇತಿ ನೀಡುವುದು ಅವಶ್ಯ ಎಂದರು.

  ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಸೈನಿಕರ ಸಂಘ ಹುಟ್ಟು ಹಾಕಲು ತಾನು ಎಲ್ಲರಿಗಾಗಿ, ಎಲ್ಲರಿಗಾಗಿ ತಾನು ಎಂಬ ಸಂಕಲ್ಪವೇ ಕಾರಣ. ತಾಲೂಕಿನಲ್ಲಿ ಹೆಚ್ಚು ಸೈನಿಕರನ್ನು ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆ ಮಲ್ಲಾಪುರಕ್ಕಿದೆ ಎಂದರು.

  \ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸೈನಿಕರು ಗಡಿ ಕಾಯುತ್ತಿರುವುದರಿಂದಲೇ ನಾವು ನೆಮ್ಮದಿಯಿಂದ ಇದ್ದೇವೆ ಎಂದರು. ವಿಧಾನಸೌಧ ಉಪಕಾರ್ಯದರ್ಶಿ ಯು.ಬಿ.ಉಳವಿ ಮಾತನಾಡಿದರು.

  ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಹಾಗೂ ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯಸಭಾ ಸದಸ್ಯರ ನಿಧಿಯಿಂದ ಗಾಳೇಶ್ವರ ಮಠಕ್ಕೆ ಸಭಾಭವನ ನಿರ್ಮಿಸಲು 5 ಲಕ್ಷ ರೂ.ಬಿಡುಗಡೆ ಮಾಡಿದರು. ಲೆಫ್ಟಿನಂಟ್ ಕರ್ನಲ್ ಗುರುಸಿದ್ಧಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಅಶೋಕ ವಕ್ಕುಂದ, ಶಿವನಗೌಡ ಪಾಟೀಲ, ನಿಂಗಪ್ಪ ಅರಕೇರಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ರವಿ ಹೊನ್ನಯ್ಯನವರ, ಮುಖ್ಯೋಪಾಧ್ಯಾಯ ಶರಣು ಎಂ.ಎಸ್. ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts