More

    ದೇಶದಲ್ಲೇ ತಯಾರಾಗಲಿವೆ 11 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್​ಫೋನ್​ಗಳು; ಸ್ವಾವಲಂಬಿ ಭಾರತಕ್ಕೆ ಬಂತು ಬಲ

    ನವದೆಹಲಿ: ಆ್ಯಪಲ್​, ಸ್ಯಾಮಸ್ಂಗ್​ ಸೇರಿ 22 ದೇಶೀಯ ಹಾಗೂ ವಿದೇಶಿ ಕಂಪನಿಗಳು ಭಾರತದಲ್ಲಿ ಸ್ಮಾರ್ಟ್​ಫೋನ್​ ತಯಾರಿಕೆಗೆ ಸಾಲುಗಟ್ಟಿ ನಿಂತಿವೆ. ಈ ಮೂಲಕ ದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಒಟ್ಟು 11 ಲಕ್ಷ ಕೋಟಿ ರೂ. ಮೊತ್ತದ ಸ್ಮಾರ್ಟ್​ಫೋನ್​ ಉತ್ಪಾದನೆಯಾಗಲಿವೆ.

    41,000 ಕೋಟಿ ರೂ. ಮೊತ್ತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಅನುದಾನ ಯೋಜನೆಯಡಿಯಲ್ಲಿ (ಪಿಎಲ್​ಐ) ಸ್ಮಾಟ್​ರ್ಫೋನ್​ ಉತ್ಪಾದಕರು 12 ಲಕ್ಷ ಉದ್ಯೋಗ ಸೃಷ್ಟಿಸಲಿದ್ದಾರೆ. ಇದರಲ್ಲಿ 3 ಲಕ್ಷ ನೇರ ಉದ್ಯೋಗಾವಕಾಶವಾದರೆ, 9 ಲಕ್ಷ ಪರೋಕ್ಷ ಉದ್ಯೋಗವಾಗಿರಲಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್​ ಪ್ರಸಾದ್​ ಹೇಳಿದ್ದಾರೆ.

    ಇದನ್ನೂ ಓದಿ; ಹೆಚ್ಚಾಗಲಿದೆ ಕರೆ ದರ, ಡೇಟಾ ಶುಲ್ಕ; ಬಳಕೆ ಹೆಚ್ಚಾದರೂ ನಷ್ಟದಲ್ಲಿವೆಯಂತೆ ಕಂಪನಿಗಳು…!

    ಒಟ್ಟಾರೆ 11 ಲಕ್ಷ ಕೋಟಿ ರೂ. ಮೊತ್ತದ ಸ್ಮಾರ್ಟ್​ಫೋನ್​ ಉತ್ಪಾದನೆಯಾದರೆ, 7 ಲಕ್ಷ ಕೋಟಿ ರೂ. ಮೊತ್ತ ರಫ್ತು ಸಾಧ್ಯವಾಗಲಿದೆ. ಒಟ್ಟು 22 ಕಂಪನಿಗಳು ಉತ್ಪಾದನೆಯಲ್ಲಿ ತೊಡಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
    ವಿದೇಶ ಕಂಪನಿಗಳು 15 ಸಾವಿರ ರೂ. ಹಾಗೂ ಅದಕ್ಕೆ ಮೇಲ್ಪಟ್ಟ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಲಿದ್ದರೆ, ದೇಶಿಯ ಕಂಪನಿಗಳಿಗೆ ಬೆಲೆ ಮಿತಿ ಇರುವುದಿಲ್ಲ.

    ಎಲೆಕ್ಟ್ರಾನಿಕ್ಸ್​ ಉತ್ಪಾದನಾ ಕ್ಷೇತ್ರದಲ್ಲಿ ಒಂದು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆ ಹೊಂದಲಾಗಿದೆ. ಸ್ವಾವಲಂಬಿ ಭಾರತಕ್ಕೆ ಇದು ಪೂರಕವಾಗಿರಲಿದೆ. 2025ರ ವೇಳೆ ಉತ್ಪಾದನಾ ಕ್ಷೇತ್ರದಿಂದ 10 ಲಕ್ಷ ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ರಿಲಯನ್ಸ್​ನಿಂದ 27,000 ಕೋಟಿ ರೂ.ಗೆ ಬಿಗ್​ ಬಜಾರ್​ ಖರೀದಿ? ರಿಟೇಲ್​ ಕ್ಷೇತ್ರದಲ್ಲಿ ಸಂಚಲನ; ಅಮೆಜಾನ್​, ಫ್ಲಿಫ್​ಕಾರ್ಟ್​ಗೆ ಠಕ್ಕರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts