More

    ಲೈಟ್ ಫಿಶಿಂಗ್ ದೋಣಿ ವಶಕ್ಕೆ ಪಡೆದ ಮೀನುಗಾರರು

    ಉಡುಪಿ: ಸಮುದ್ರತೀರದಲ್ಲಿ ಲೈಟ್ ಫಿಶಿಂಗ್ ನಡೆಸುತ್ತಿದ್ದ ಕೇರಳದ ಬೋಟು ಹಾಗೂ ಆದರಲ್ಲಿದ್ದ ತಮಿಳುನಾಡಿನ 10 ಮಂದಿ ಮೀನುಗಾರರನ್ನು ಪರ್ಸೀನ್ ಮೀನುಗಾರರು ಹಿಡಿದು ಮಲ್ಪೆ ಬಂದರಿಗೆ ತಂದಿದ್ದಾರೆ.

    ಗುರುವಾರ ಮುಂಜಾನೆ ಮಲ್ಪೆಯ ಮಕರ ಸಂಕ್ರಾತಿ ಪರ್ಸೀನ್ ಬೋಟು ಮೀನುಗಾರಿಕೆ ತೆರೆಳಿದ್ದು, ಮಲ್ಪೆಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಹೊರರಾಜ್ಯದ ಇಂಡಿಯನ್ ಹೆಸರಿನ ಹೊಸ ಬೋಟೊಂದು ಎರಡು ದೋಣಿಗಳ ಸಹಾಯದಿಂದ ಲೈಟ್‌ಫಿಶಿಂಗ್ ಹಾಗೂ ಚೌರಿ ಹಾಕಿ ಮೀನು ಹಿಡಿಯುತ್ತಿರುವುದು ಕಂಡು ಬಂದಿದೆ.

    ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಇಂಡಿಯನ್ ಬೋಟಿನ ಮೀನುಗಾರರು ಮಕರ ಸಂಕ್ರಾತಿ ಬೋಟಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಮೂವರು ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ಬೋಟಿನಲ್ಲಿದ್ದ ಮೀನುಗಾರರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಹಲ್ಲೆ ನಡೆಸಿದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಉಳಿದ ಪರ್ಸೀನ್ ಮೀನುಗಾರರು ಧಾವಿಸಿ ಇಂಡಿಯನ್ ಹೆಸರಿನ ಬೋಟನ್ನು ವಶಪಡಿಸಿಕೊಂಡಿದ್ದಾರೆ. ಈ ಬೋಟು ಕೇರಳದ ಫಾರೂಕ್ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts