More

    ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

    ಚಿಕ್ಕೋಡಿ: ದೇಶ ಕಟ್ಟುವ ಅದ್ಭುತ ಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು ಕಲಿತ ಶಿಕ್ಷಕರಾಗದೇ ನಿತ್ಯ ಕಲಿಯುವ ಶಿಕ್ಷಕರಾಗಬೇಕು ಎಂದು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಸಲಹೆ ನೀಡಿದ್ದಾರೆ.

    ಪಟ್ಟಣದ ಸಿಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಬಿ.ಸಿ.ಗಂಗಾಲ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ, ಸಾಧಕ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸಿಎಲ್‌ಇ ಸಂಸ್ಥೆಯಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಿ.ಸಿ.ಗಂಗಾಲ ಅವರಿಂದ ಲಾಟಿ ಏಟು ತಿಂದವರು ಉತ್ತಮ ಶಿಕ್ಷಕರಾಗಿ ಜತೆಗೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬದುಕಿನಲ್ಲಿ ಶಿಸ್ತುಬದ್ಧ ಮತ್ತು ನೈತಿಕ ಮೌಲ್ಯ ಅಳವಡಿಸಿಕೊಂಡು ಮಾದರಿ ಜೀವನ ನಡೆಸುತ್ತಿರುವುದು ಶ್ಲಾಘನೀಯ ಎಂದರು.

    ಬಿ.ಸಿ.ಗಂಗಾಲ ಆದರ್ಶ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ರಾಜೇಂದ್ರ ದೇವಋಷಿ ಮಾತನಾಡಿ, ಇಂದಿನ ದಿನಮಾನದಲ್ಲಿ ಗುರು ಶಿಷ್ಯರ ಸಂಬಂಧಗಳು ಕಳಚಿಹೋಗುತ್ತಿವೆ. ಇಂಥ ಸಂದರ್ಭದಲ್ಲಿ ಗುರುಗಳ ಹೆಸರಿನಲ್ಲಿ ಪ್ರಶಸ್ತಿ ಕೊಡುವುದು. ಹಾಗೂ ಅವರ ಹೆಸರನ್ನು ಒಂದು ಸಂಸ್ಥೆಗೆ ಇಟ್ಟು ಅವರ ಕಾರ್ಯವನ್ನು ಸ್ಮರಿಸುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿಎಲ್‌ಇ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶನ ನೀಡಿದ ಶಿಕ್ಷಕ ಬಳಗವನ್ನು ಹಾಗೂ ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಸಹನಾ ಕಾಮಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

    ಸಂಪಾದನಾ ಶ್ರೀ, ಸಾಹಿತಿ ವಿಜಯಕುಮಾರ ಪಾಟೀಲ, ಸಿಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ, ಡಾ.ದಯಾನಂದ ನೂಲಿ, ಶ್ರೀಧರ ಕುಲಕರ್ಣಿ,ಸುಬ್ಬರಾವ ಎಂಟೆತ್ತಿನವರ, ಸಂಜಯ ಕವಟಗಿಮಠ, ಎ.ಕೆ.ಮೋಮಿನ, ಸಂಜೀವ ಮಧಾಳೆ, ಸಾಗರ ಬೀಸ್ಕೋಪ, ಜಗದೀಶ ಕಾದ್ರೋಳಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts