More

    ಶರಣರ ಸತ್ಸಂಗದಿಂದ ಬದುಕು ಸಾರ್ಥಕ

    ಸೊರಬ: ಸತ್ಯಮಾರ್ಗದಲ್ಲಿ ನಡೆಯುವ, ಸದಾಚಾರ ಹೊಂದಿದ, ಪರೋಪಕಾರಕ್ಕಾಗಿ ಜೀವನ ನಡೆಸುವವರು ಶರಣ. ಅಂತಹ ಸತ್ಸಂಗ ಇರುವವರ ಮಾರ್ಗದರ್ಶನದಲ್ಲಿ ಮನುಷ್ಯ ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ಚರ ಸಾಮೀಜಿ ನುಡಿದರು.

    ಪಟ್ಟಣದ ಕಾನುಕೆರೆಯ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ 114ನೇ ಅಮಾವಾಸ್ಯೆಯ ಶಿವಾನುಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ವೇಷಢಾಂಬೀಕರಿರುವ ಈ ಜಗತ್ತಿನಲ್ಲಿ ಎಲ್ಲವು ಸಿಗುತ್ತದೆ. ಆದರೆ ಒಳ್ಳೆಯವರ ಸತ್ಸಂಗ ವಿರಳ. ನಾವೇ ಒಳ್ಳೆಯವರು ಎಂದು ಅಂದುಕೊಂಡರೆ ಸಾಲದು, ಸಮಾಜ ನಮ್ಮನ್ನು ಒಪ್ಪಿಕೊಳ್ಳಬೇಕು. ಅದರಿಂದ ಸತ್ಸಂಗದ ಜತೆ, ಒಳ್ಳೆಯ ಮಾತುಗಳನ್ನಾಡುತ್ತ ಉತ್ತಮ ಸಂಸ್ಕಾರ ಇರುವವರನ್ನು ಹುಡುಕುವ ತುಡಿತ ನಮ್ಮಲ್ಲಿರಬೇಕು. ಸಮಾಜದಲ್ಲಿ ಎಲ್ಲರನ್ನು ಒಂದೇ ರೀತಿ ಪ್ರೀತಿಸುವ ಗುಣ ನಮ್ಮದಾಗಬೇಕು. ಯಾವುದೇ ಕಷ್ಟಕಾರ್ಪಣ್ಯಕ್ಕೆ ಹೆದರದೆ ನಿರ್ಲ್ತಿತನಾಗಿದ್ದು, ಮುಕ್ತನಾಗುತ್ತಾನೂ ಅವರು ಇಲ್ಲಿಯೇ ಮುಕ್ತಿ ಕಾಣುತ್ತಾನೆ ಎಂದರು.
    ಎಳ್ಳಮಾವಾಸ್ಯೆಯ ನಂತರ ದಕ್ಷಿಣಾಯನ ಕಾಲದಿಂದ ಉತ್ತರಾಯಣ ಕಾಲದ ಕಡೆ ಸಾಗುವ ಸೂರ್ಯನ ಪಥ ವಿಶೇಷವಾದದ್ದು. ಮಕರ ಸಂಕ್ರಮಣ ಬರುತ್ತಿದ್ದಾಂತೆ ಮನುಷ್ಯ ಶರೀರದ ವರ್ಷದ ಪಾಪಗಳನ್ನು ಕಳೆದುಕೊಳ್ಳಲು ನದಿಗಳಲ್ಲಿ ಸ್ನಾನ ಮಾಡುವ ನಂಬಿಕೆ ನಮ್ಮ ಪರಪಂರಯಲ್ಲಿದೆ. ಆದರೆ ಅದು ಸಾಲದು. ಮನಸ್ಸಿನ ಕೊಳೆಯನ್ನು ತೊಳೆದುಕೊಂಡರೆ ಒಂದಿಷ್ಟು ದಿನ ಶುದ್ಧವಾಗಿರುತ್ತವೆ. ಆದ್ದರಿಂದ ಮನಸ್ಸಿನ ಕೊಳೆ ತೊಳೆಯಲು ಕೂಡಲ ಸಂಗನ ಶರಣರ ಅನುಭವವನ್ನು ಮಾಡಬೇಕು ಎಂದರು.
    ಅಕ್ಕನ ಬಳಗದ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ನಿವೃತ್ತ ಪಿಎಸ್‌ಐ ಸಿದ್ದಲಿಂಗ್ಯಯ, ಉದ್ಯಮಿಗಳಾದ ರಾಜೇಂದ್ರ ಪ್ರಸಾದ್, ರಮೇಶ್, ಪ್ರಕಾಶ್, ಚಂದ್ರಶೇಖರ್ ನಿಜಗುಣ, ಲಿಂಗರಾಜ್, ನಾಗರಾಜ ಗುತ್ತಿ, ಶಂಕರಶೇಟ್, ವಿಶ್ವನಾಥ, ಮಂಜುನಾಥ ಹೊಸಕೊಪ್ಪ, ವಿನೋದ್ ವಾಲ್ಮಿ, ಚಿನ್ನಮ್ಮ ಗುತ್ತಿ, ಜಯಮಾಲಾ, ಸುನಿತಾ, ಮಾನಸಾ, ಲತಾ, ಪುಷ್ಪಾ, ರೂಪಾ, ಉಮಾ, ಸುಧಾ, ಲಕ್ಷ್ಮೀಕಾಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts