More

    ಸತ್ಕಾರ್ಯಗಳಿಂದ ಬದುಕು ಸಾರ್ಥಕ: ಹುಕ್ಕೇರಿ ಶ್ರೀ ಆಶೀರ್ವಚನ

    ಸೊರಬ: ವಾರಂಟಿ, ಗ್ಯಾರಂಟಿ ಇಲ್ಲದ ಮಾನವ ಜೀವನದಲ್ಲಿ ಸದಾ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.

    ಪಟ್ಟಣದ ಮುರುಘಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಾಗಿ ಹುಟ್ಟುವುದೇ ವಿಶೇಷವಾಗಿದ್ದು ಏನಾದರೂ ಸಾಧನೆ ಮಾಡುವುದು ಅನಿವಾರ್ಯ ಮತ್ತು ಅವಶ್ಯಕ. ಸತ್ಕಾರ್ಯ ಸದಾಚಾರಗಳನ್ನು ಹೊಂದುವ ಮೂಲಕ ಅನಿಶ್ಚಿತ ಬದುಕಿನಲ್ಲಿ ಸಾರ್ಥಕತೆಯನ್ನು ಸಾಧಿಸಬೇಕು. ಪ್ರಾಣಿ-ಪಕ್ಷಿಗಿಂತ ಭಿನ್ನವಾಗಿರುವ ನಾವುಗಳು ಹಿಂದಿನ ಜನ್ಮವನ್ನು ಏಣಿಸುತ್ತ ಕೊರದೆ, ಈ ಜನ್ಮದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ತುಡಿತ ನಮ್ಮಲ್ಲಿ ಇರಬೇಕು ಎಂದರು.
    ಶೆಗುಣಸಿ ವಿರಕ್ತ ಮಠದ ಡಾ. ಶ್ರೀ ಪ್ರಭು ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಅಂತರಂಗದಲ್ಲಿ ದೇವರನ್ನು ನೆನೆದರೆ ಎಲ್ಲರು ದೇವರಂತೆ ಕಾಣುತ್ತತ್ತಾರೆ. ಪ್ರತಿಯೋಂದು ಅಣುರೇಣು ಕಣದಲ್ಲಿ ದೇವರಿದ್ದಾನೆ. ದೇವರನ್ನು ಅಂತರಮುಖ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಬೇರೆಯವರನ್ನು ಸೋಲಿಸಲು ಪ್ರಯತ್ನಿಸದೆ, ನಮ್ಮನ್ನು ನಾವು ಸೋಲಿಸಲು ಪ್ರಯತ್ನಿಸಿದಾಗ ಗೆಲುವು ನಮ್ಮದಾಗುತ್ತದೆ. ಅಧ್ಯಾತ್ಮದ ಭಾವನೆ ಮತ್ತು ಪ್ರೀತಿಯಿಂದ ಕೆಲಸ ಮಾಡಿದರೆ ನಮ್ಮ ಸುತ್ತಲಿನ ಪರಿಸರ ನಮ್ಮದಾಗುತ್ತದೆ ಎಂದು ಹೇಳಿದರು.
    ಸಾನ್ನಿಧ್ಯ ವಹಿಸಿದ ಆಶೀರ್ವಚನ ನೀಡಿದ ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಸಾಧು-ಸಂತರು ಒಟ್ಟಾಗಿ ಸೇರಿದರೆ ದೀಪಾವಳಿಯಂತೆ ಸಂಭ್ರಮ ಮನೆ ಮಾಡುತ್ತದೆ. ಭಕ್ತರು ಮಠದ ಸಂಪತ್ತಾಗಿದ್ದು ಜಡೆ ಮಠದ ಜಾತ್ರಾಮಹೋತ್ಸವಕ್ಕೆ ಮತ್ತು ಪ್ರವಚನ ಕೇಳಲು ಭಕ್ತರ ದಂಡೆ ಹರಿದು ಬರುತ್ತದೆ ಎಂದರು.
    ಫೆ.20ರಂದು ಅಲ್ಲಮಪ್ರಭುಗಳ ಮೂರ್ತಿ ಮೆರವಣಿಗೆಯ ಸ್ವಾಗತ ಕಾರ್ಯಕ್ರಮವಿದೆ. ಅಂದು 1,111 ಭಕ್ತರು ಅಲ್ಲಮಪ್ರಭುಗಳ ವಚನ ಸಾಹಿತ್ಯದ ಹಾಗೂ ತತ್ವ ಸಿದ್ಧಾಂತದ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ತರಲಿದಾರೆ. ಈ ಐತಿಹಾಸಿಕ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾಗಬೇಕೆಂದು ಮನವಿ ಮಾಡಿದರು.
    ಬೆಂಗಳೂರಿನ ಅಮರೇಶ ಗವಾಯಿ ತಂಡದಿಂದ ಗಾಯನ ನಡೆಯಿತು. ರೇಖಾ ಜಗದೀಶ್ ಕುಟುಂಬದವರು ಪ್ರಸಾದ ದಾಸೋಹ ನಡೆಸಿಕೊಟ್ಟರು. ಅಕ್ಕನ ಬಳಗದಿಂದ ಭಜನೆ ಕಾರ್ಯಕ್ರಮ ನಡೆಯಿತು.
    ವಿಜಯಪುರದ ಶ್ರೀ ಸಿದ್ದಲಿಂಗದೇವರು, ಲಿಂಗನಾಯಕನಳ್ಳಿಯ ಶ್ರೀ ನಿರಂಜನ ದೇವರು, ತೆಲಂಗಾಣದ ಶ್ರೀ ವಿರುಪಾಕ್ಷ ದೇವರು, ವಿಜಯಪುರದ ಶ್ರೀ ಘನಲಂಗ ದೇವರು, ಸೂಲೇಪೇಟೆಯ ಶ್ರೀ ಖಟವಾಗೇಸ್ವರ ದೇವರು, ಅಬಲೂರಿನ ಶ್ರೀ ಗಂಗಧರ ದೇವರು, ಶ್ರೀ ಷಡಕ್ಷರಿ ಸ್ವಾಮೀಜಿ, ವೀರಶೈವ ಸಮಾಜದ ಟೌನ್ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಜಗದೀಶ್, ಡಿ.ಶಿವಯೋಗಿ, ನಾಗಪ್ಪ, ರೇಣುಕಮ್ಮ ಗೌಳಿ, ಲೋಲಾಕ್ಷಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts