More

    ಮಹಾತ್ಮರ ಚಿಂತನೆ ಅಳವಡಿಕೆಯಿಂದ ಜೀವನ ಸಾರ್ಥಕ

    ಶಿಗ್ಗಾಂವಿ: ಚಿಂತಕರ, ದಾರ್ಶನಿಕರು, ಮಹನೀಯರ ಆತ್ಮ ಕಥೆಗಳನ್ನು ವಿದ್ಯಾರ್ಥಿಗಳು ಓದುವ ಮೂಲಕ ಅವರು ನೀಡಿರುವ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಎಸ್.ಕೆ. ಪವಾರ ಹೇಳಿದರು.

    ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಕಾಲೇಜು ಹಾವೇರಿ ಜಿಲ್ಲಾ ವಲಯ ಮಟ್ಟದ 2024 – ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಸ್ವಯಂಪ್ರೇರಣೆಯಿಂದ ತೊಡಗಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ವೈ. ತೊಂಡಿಹಾಳ ಮಾತನಾಡಿ, ಪ್ರತಿಭೆಯನ್ನು ಕೇವಲ ಪ್ರಶಸ್ತಿಗಳಿಗೆ ಸೀಮಿತವಾಗಿರಿಸಿಕೊಳ್ಳದೆ ಇಂತಹ ಹಲವು ವೇದಿಕೆಗಳಲ್ಲಿ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರೆ ಪ್ರಶಸ್ತಿಯು ತಾನಾಗಿಯೇ ಅರಸಿ ಬರುತ್ತದೆ. ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆ ವ್ಯಕ್ತಪಡಿಸಬೇಕು ಎಂದರು.

    ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ ಉಪನ್ಯಾಸ ನೀಡಿದರು. ಯುವಜನೋತ್ಸವ ಸಂಯೋಜಕ ಡಾ. ಶ್ರೀಶೈಲ ಹುದ್ದಾರ, ಸಹ ಸಂಯೋಜಕ ಡಾ. ಎಚ್.ಕೆ. ವಿನಯ, ಧಾರವಾಡ ಕವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಅಧೀಕ್ಷಕ ಸಂತೋಷ ಕೆ. ಮತ್ತು ಅಧ್ಯಕ್ಷ ಎಸ್. ಕದಾಣಿ, ಡಾ. ಡಿ.ಎ. ಗೊಬ್ಬರಗುಂಪಿ, ಸಿ.ಎಸ್. ತಾವರಗುಂದಿ, ಪ್ರೊ. ಬಿ.ಎಂ. ಮುಳಗುಂದ, ಜಿ. ಎನ್. ಎಲಿಗಾರ, ಮಲ್ಲಪ್ಪ ರಾಮಗೇರಿ, ಶೃತಿ ಕಟ್ಟಿ ಹಾಗೂ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.* ಗುದ್ದಲೀಶ್ವರ ಸ್ವಾಮೀಜಿ ಆಶೀರ್ವಚನ | ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಸಮಾರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts