More

    ಜೀವನದಲ್ಲಿ ಸತ್ಕಾರ್ಯ ಮಾಡಿ

    ಕುಕನೂರು: ಹಸು ಹಾಲು, ಮರ ಫಲ, ಹೂ ಪರಿಮಳ ಕೊಡುತ್ತದೆ. ಇವೆಲ್ಲವೂ ತನಗಾಗಿ ಏನನ್ನು ಸ್ವೀಕರಿಸದೇ ಎಲ್ಲವನ್ನೂ ಮಾನವನಿಗಾಗಿ ಧಾರೆಯೆರಿಯುತ್ತಿದ್ದು, ಅದರಂತೆ ಮನುಷ್ಯ ಜೀವನದ ಒಂದಿಷ್ಟು ಸಮಯವನ್ನು ಇತರರಿಗೆ ಮೀಸಲಿಡಬೇಕು. ಜೀವನದಲ್ಲಿ ಸತ್ಕಾರ್ಯ ಮಾಡಬೇಕು ಎಂದು ಚಿಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರು ಹೇಳಿದರು.

    ಇದನ್ನೂ ಓದಿ: ಸತ್ಕಾರ್ಯದಿಂದ ಜೀವನದಲ್ಲಿ ಸಾರ್ಥಕತೆ

    ತಾಲೂಕಿನ ಚಿಕೇನಕೊಪ ಗ್ರಾಮದಲ್ಲಿ ಶ್ರೀಸಜ್ಜಲಗುಡ್ಡದ ಶ್ರೀಶರಣಮ್ಮನವರ ಪುರಾಣ ಮಹಾಮಂಗಲೋತ್ಸವ ಹಾಗೂ ಪತ್ರಕರ್ತ ಮಲ್ಲು ಬಿ.ಮಾಟರಂಗಿ ರಚಿಸಿದ ‘ನಮ್ಮೂರು ಚಿಕೇನಕೊಪ್ಪದ ಇತಿಹಾಸ’ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಧರ್ಮ ಜಾಗೃತಿ ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

    ಚೆನ್ನವೀರ ಶರಣರ ಆರ್ಶೀವಾದದಿಂದ ಗ್ರಾಮ ಸದಾ ಸುಂದರವಾಗಿದೆ. ಗ್ರಾಮದಲ್ಲಿ ಸದಾ ಧರ್ಮದ ಕಾರ್ಯಗಳು ನಡೆಯುತ್ತಾವೆ. ಧಾರ್ಮಿಕ ಮನೋಭಾವದಿಂದ ಗ್ರಾಮಕ್ಕೆ ಪುಣ್ಯಪ್ರಾಪ್ತಿಯಾಗಿದೆ.

    ಪುರಾಣಗಳನ್ನು ಕೇಳುವದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಗ್ರಾಮ ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದ್ದು ಭಕ್ತಿಭಾವಗಳ ಸಂಗಮವಾಗಿದೆ. ಗ್ರಾಮದ ಯುವ ಪತ್ರಕರ್ತ ಮಲ್ಲು ಮಾಟರಂಗಿ ಅವರು ಪುಸ್ತಕವನ್ನು ಚೆನ್ನಾಗಿ ಬರೆದಿದ್ದು ಅವರ ಸಾಹಿತ್ಯ ಕಾರ್ಯ ಇನ್ನಷ್ಟು ಸಾಗಲಿ ಎಂದರು.

    ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀಅನ್ನಧಾನ ಭಾರತಿ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬರು ಧಾರ್ಮಿಕ ಮನೋಭಾವ ಬೆಳಸಿಕೊಳ್ಳಿ, ‘ನಮ್ಮೂರು ಚಿಕೇನಕೊಪ್ಪ ಇತಿಹಾಸ’ ಪುಸ್ತಕದಲ್ಲಿ ಧಾರ್ಮಿಕ ಕ್ಷೇತ್ರ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಕ್ಷೇತ್ರದ ಎಲ್ಲದರ ಬಗ್ಗೆ ಬರೆದಿದ್ದು ಉತ್ತಮ ಕಾರ್ಯವಾಗಿದೆ. ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗಮನ ಸೆಳೆದಿದ್ದು ಹೆಮ್ಮೆಯ ಸಂಗತಿ ಎಂದರು.

    ಪತ್ರಕರ್ತ ಮಲ್ಲು ಮಾಟರಂಗಿ, ಚುರ್ಚಿಹಾಳದ ಪುಟ್ಟರಾಜ ಶಾಸ್ತ್ರಿ, ಚಿಕ್ಕ ಮಕ್ಕಳ ತಜ್ಞ ಡಾ.ಮಂಜುನಾಥ ವಕ್ಕಳದ, ಯಲಬುರ್ಗಾ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ, ಬಸವಲಿಂಗಪ್ಪ ವಕ್ಕಳದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts