More

    ಸತ್ಕಾರ್ಯದಿಂದ ಜೀವನದಲ್ಲಿ ಸಾರ್ಥಕತೆ

    ಬಸವಕಲ್ಯಾಣ: ಸದ್ಗುಣ, ಸದಾಚಾರ, ಸತ್ಕಾರ್ಯಗಳು ಜೀವನದಲ್ಲಿ ನೆಮ್ಮದಿ ಹಾಗೂ ಸಾರ್ಥಕತೆ ತಂದು ಕೊಡುತ್ತವೆ ಎಂದು ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

    ಪವಿತ್ರ ಶ್ರಾವಣ ಮಾಸದ ನಿಮಿತ್ತ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕ ಸಹಯೋಗದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವೀರಶೈವ ಲಿಂಗಾಯತ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದರು.

    ಮನುಷ್ಯನ ಮನಸ್ಸಿನಲ್ಲಿ ಯಾವಾಗ ಲೋಭಗುಣ ಪ್ರಾಬಲ್ಯ ತಾಳುವುದು ಆಗ ಮನಸ್ಸಿನಲ್ಲಿ ಚೌರ್ಯತನ ಹುಟ್ಟಿಸುತ್ತದೆ. ಚೌರ್ಯ ಎಂದರೆ ಮತ್ತೊಬ್ಬರ ವಸ್ತು ಅಪಹರಿಸುವುದಷ್ಟೇ ಅಲ್ಲ ತಾನೇ ಅನ್ಯರಿಗೆ ಕೊಟ್ಟ ವಸ್ತು ಪುನಃ ತೆಗೆದುಕೊಂಡರೆ ಅದೂ ಚೌರ್ಯ ಎಂದರು.

    ಮಕ್ಕಳ ತಜ್ಞ ಡಾ.ಜಿ.ಎಸ್ ಭುರಳೆ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ಮೊಬೈಲ್ ಕೊಡದೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸಿಕೊಡುವಲ್ಲಿ ಪಾಲಕರು ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದರು.
    ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಗವಿಮಠದ ಶ್ರೀಗಳು ನಡೆ-ನುಡಿ ಒಂದಾಗಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಮಠವೂ ಸರ್ವರನ್ನು ಕೈ ಬೀಸಿ ಕರೆಯುತ್ತಿದೆ ಎಂದರು.

    ಬೀದರ್ ದಂತ ವೈದ್ಯ ಡಾ.ವಿಜಯಕೊಂಡ ಮಾತನಾಡಿ, ಜೀವನಕ್ಕೆ ದುಡ್ಡು ಮುಖ್ಯ. ದುಡ್ಡು ಪ್ರಾಮಾಣಿಕವಾಗಿ ಹೇಗೆ ಸಂಪಾದಿಸಬೇಕು ಎಂಬುದು ಅರಿಯುವುದು ಮನಸ್ಸಿನಲ್ಲಿರಬೇಕು. ಒಂದು ವ್ಯವಹಾರಕ್ಕೆ ಸೀಮಿತವಾಗದೆ ಎರಡು ವ್ಯವಹಾರ, ವ್ಯಾಪಾರ ಮಾಡಿದಾಗ ಮಾತ್ರ ಏಳಿಗೆ ಮಾಡಿಕೊಳ್ಳಬಹುದು ಎಂದರು.

    ಬಜರಂಗದಳದ ಸಂಯೋಜಕ ರವಿ ನಾವದ್ಗೇಕರ ಮಾತನಾಡಿದರು. ವಿಎಚ್‌ಪಿ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಸಂಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಅಲಗುಡೆ, ರುದ್ರಮುನಿ ಚನ್ನೂರ, ಶರಣಬಸಪ್ಪ ಅಲಗುಡೆ, ಸಿದ್ದಲಿಂಗಪ್ಪ ಗೌಡ, ಬಸವರಾಜ ಉಪಾಸೆ, ಲೋಕೇಶ ಮೊಳಕೇರಿ, ಶಿವಕುಮಾರ ಬಿರಾದಾರ, ಸಂದೀಪ ಪಾಟೀಲ್, ಶ್ರೀನಿವಾಸ ಬಿರಾದಾರ, ಅನಿಲ ಸಕ್ಕರಬಾವಿ, ಅಜಯ ಸ್ವಾಮಿ, ಆಕಾಶ ಬಾಲಕಿಲೆ, ವೀರಶೆಟ್ಟಿ ಮಡಿವಾಳ ಇತರರಿದ್ದರು.
    ಷಣ್ಮುಖಯ್ಯ ಸ್ವಾಮಿ ಸ್ವಾಗತಿಸಿದರು. ಶಿವಕುಮಾರ ಮುನ್ನೊಳಿ ಸಂಚಾಲನೆ ಮಾಡಿದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೂತನ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts