More

    ಕೃಷ್ಣರಾಯ ಕೊಡ್ಗಿ ಜೈಲಿನಿಂದ ಬರೆದ ಪತ್ರ ವೈರಲ್

    ವಿಜಯವಾಣಿ ಸುದ್ದಿಜಾಲ ಕುಂದಾಪುರ

    ಮಂಗಳೂರು ಸಬ್‌ಜೈಲಿನಿಂದ ಮತದಾರರಿಗೆ ಪತ್ರ ಬರೆದು ಮತದಾನ ಮಾಡುವಂತೆ ಮನವಿ ಮಾಡಿ ಗೆದ್ದವರು ಕೃಷ್ಣರಾಯ ಕೊಡ್ಗಿ. ಅವರ ಮೊಮ್ಮಗ ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ. ಕಿರಣ್ ಕುಮಾರ್ ಕೊಡ್ಗಿಯವರ ತಂದೆ ಎ.ಜಿ.ಕೊಡ್ಗಿ ಬೈಂದೂರು ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿ ಶಾಸಕರಾಗಿದ್ದರು.

    ಕೃಷ್ಣರಾಯ ಕೊಡ್ಗಿ ಪತ್ರ ವೈರಲ್

    ಸ್ವಾತಂತ್ರೃ ಪೂರ್ವ 1932ರಲ್ಲಿ ಜೈಲಲ್ಲಿ ಕೂತು ಮತದಾನ ಮಾಡುವಂತೆ ಕೃಷ್ಣರಾಯ ಕೊಡ್ಗಿ ಬರೆದ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ. ಸ್ವಾತಂತ್ರೃಪೂರ್ವದಲ್ಲಿ ಹೀಗೊಂದು ಘಟನೆ ನಡೆದಿತ್ತು ಎನ್ನುವ ವಿಚಾರ ಈಗಿನ ಪೀಳಿಗೆಗೆ ಗೊತ್ತಿಲ್ಲ.

    ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ

    ಕಿರಣ್ ಕುಮಾರ್ ಕೊಡ್ಗಿ ಕುಟುಂಬಕ್ಕೆ ಸ್ವಾತಂತ್ರೃ ಹೋರಾಟದ ಹಿನ್ನೆಲೆಯಿದೆ. ಕೃಷ್ಣರಾಯ ಕೊಡ್ಗಿ ಕೋಟ ಶಿವರಾಮ ಕಾರಂತರ ಜತೆ ಸ್ವಾತಂತ್ರೃ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. ಮನೆ ಮನೆಗೆ ತೆರಳಿ ಸ್ವಾತಂತ್ರೃ ಸಂಗ್ರಾಮಕ್ಕೆ ಜನರನ್ನು ಒಗ್ಗೂಡಿಸುತ್ತಿದ್ದರು. ಇದಕ್ಕೆ ಸಿಕ್ಕ ಫಲ ಜೈಲು ಶಿಕ್ಷೆ.

    ಉಪ್ಪಿನ ಸತ್ಯಾಗ್ರಹ

    ಕುಂದಾಪುರ ಗಾಂಧಿ ಮೈದಾನದಲ್ಲಿ ಉಪ್ಪಿನ ಸತ್ಯಾಗ್ರಹ ಮಾಡಿ ಸಾಂಕೇತಿಕವಾಗಿ ಉಪ್ಪು ಮಾರಿ ಪ್ರತಿಭಟಿಸಿದ್ದು ಕೃಷ್ಣರಾಯ ಕೊಡಿ.್ಗ ಪತ್ನಿ ರಾಜಮ್ಮ ಪತಿಯ ನಡೆ ಬೆಂಬಲಿಸಿದ್ದರು. ಕೊಡ್ಗಿ ಕುಟುಂಬ ಅಂದಿನ ಕಾಲದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ಕುಟುಂಬದಲ್ಲಿ ಒಂದಾಗಿದ್ದು, 8 ಸಾವಿರ ತೆರಿಗೆ ಆಗಿನ ಕಾಲದಲ್ಲಿ ಪಾವತಿಸುತ್ತಿದ್ದರು. ಅಂದಿನ ಕಾಲದಲ್ಲಿ ಕೃಷ್ಣರಾಯ ಕೊಡ್ಗಿ ಕಾಂಗ್ರೆಸ್ ಪಕ್ಷದ ಪೋಷಕರಾಗಿ ಸ್ವಾತಂತ್ರೃ ಹೋರಾಟದ ಫಲವಾಗಿ ಬಂಧನಕ್ಕೆ ಒಳಗಾಗಿದ್ದರು.
    ಕೃಷ್ಣರಾಯ ಕೊಡ್ಗಿ ಮಗ ಎ.ಜಿ.ಕೊಡ್ಗಿ ಎರಡು ಬಾರಿ ಶಾಸಕರಾಗಿದ್ದು, ಇವರ ಪುತ್ರ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಪ್ರಸ್ತುತ ಕುಂದಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

    ಜಿಲ್ಲಾ ಬೋರ್ಡ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕೃಷ್ಣರಾಯ ಕೊಡ್ಗಿ ಮಂಗಳೂರು ಸಬ್ ಜೈಲಲ್ಲಿದ್ದರು. ಮತದಾರರಿಗೆ ಪತ್ರ ಬರೆದು ಮತದಾನ ಮಾಡುವಂತೆ ವಿನಂತಿಸಿದ್ದರು. 1932, ಸೆ.26ರಂದು ಜಿಲ್ಲಾ ಬೋರ್ಡ್ ಎರಡು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕೃಷ್ಣರಾಯ ಕೊಡ್ಗಿ ಒಂದು ಸ್ಥಾನದಿಂದ ಸ್ಪರ್ಧಿಸಿದ್ದರು. ಸಬ್‌ಜೈಲಿನಿಂದ ಪತ್ರಬರೆದು ಮತಯಾಚಿಸಿ ಚುನಾವಣೆ ಗೆದ್ದು ಇತಿಹಾಸ ನಿರ್ಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts