More

    ದ.ಕ. ಜಿಲ್ಲೆ 43,701, ಉಡುಪಿಯಲ್ಲಿ 11,994 ಹೊಸಬರು ಮತಗಟ್ಟೆಯತ್ತ

    ಈ ಭಾರಿಯ ಚುನಾವಣೆಯಲ್ಲಿ ದ.ಕ. ಜಿಲ್ಲೆ 43,701, ಉಡುಪಿಯಲ್ಲಿ 11,994 ಹೊಸಬರು ಮತಗಟ್ಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಈ ಬಗ್ಗೆ ವರದಿ ಇಲ್ಲಿದೆ.

    ಮಂಗಳೂರು/ಉಡುಪಿ: ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರಿಸಲು ಏ.10ರಂದು ಕೊನೆ ದಿನವಾಗಿದ್ದು, ದ.ಕ ಜಿಲ್ಲೆಯಲ್ಲಿ 43,701, ಉಡುಪಿಯಲ್ಲಿ 11,994 ಹೊಸ ಮತದಾರರ ಸೇರ್ಪಡೆಯಾಗಿದೆ.

    ಚುನಾವಣಾ ಆಯೋಗದ ಪ್ರಕಾರ, 2023ರ ಜನವರಿ 5ಕ್ಕೆ ದ.ಕ ಜಿಲ್ಲೆಯಲ್ಲಿ ಒಟ್ಟು 17,37,688 (8,50,552 ಪುರುಷ, 8,87,060 ಮಹಿಳಾ ಮತದಾರರು) ಮತದಾನದ ಅವಕಾಶ ಪಡೆದಿದ್ದರು. ನಂತರ ಚುನಾವಣಾ ಆಯೋಗ ನಿರ್ದಿಷ್ಟ ಕಾಲಾವಕಾಶ ನೀಡಿ ಹೊಸ ಸೇರ್ಪಡೆಗೆ ಅವಕಾಶ ನೀಡಿತ್ತು. ಈ ವೇಳೆ 43,701 ಹೊಸ ಮತದಾರರ ಸೇರ್ಪಡೆಯಾಗಿದೆ. ಏ.20ಕ್ಕೆ ದ.ಕ ಜಿಲ್ಲೆಯಲ್ಲಿ ಒಟ್ಟು 17,81,389 (8,70,991 ಪುರುಷ, 9,10,314 ಮಹಿಳೆಯರು) ಮತದಾನದ ಅವಕಾಶ ಪಡೆದಿದ್ದಾರೆ.


    ಚುನಾವಣೆ ಘೋಷಣೆಗೂ ಮುನ್ನ ಬೆಳ್ತಂಗಡಿಯಲ್ಲಿ ಇದ್ದ ಮತದಾರರ ಸಂಖ್ಯೆ 2,22,144. ಪ್ರಸ್ತುತ 2,28,871 ಮತದಾರರಿದ್ದಾರೆ. ಮೂಡುಬಿದಿರೆಯಲ್ಲಿ 2,00,303 ಮತದಾರರಿದ್ದು, ಪ್ರಸ್ತುತ ಈ ಸಂಖ್ಯೆ 2,05,065 ಆಗಿದೆ. ಮಂಗಳೂರು ಉತ್ತರದಲ್ಲಿ 2,42,186 ಇದ್ದ ಸಂಖ್ಯೆ ಪ್ರಸ್ತುತ 2,49,421 ಆಗಿ ಹೆಚ್ಚಿದೆ. ಮಂಗಳೂರು ನಗರ ದಕ್ಷಿಣದಲ್ಲಿ 2,39,905 ಮತದಾರರಿದ್ದರು. ಈಗ ೀ ಸಮಖ್ಯೆ 2,45,744 ಆಗಿದೆ. 2,00,001 ಮತದಾರರಿದ್ದ ಮಂಗಳೂರಿನಲ್ಲಿ ಪ್ರಸ್ತುತ 2,05,129 ಮತದಾರರಿದ್ದಾರೆ. ಬಂಟ್ವಾಳದಲ್ಲಿ 2,22,901 ಮತದಾರರಿದ್ದು, ಈ ಸಂಖ್ಯೆ ಈಗ 2,28,377 ಆಗಿದೆ. ಪುತ್ತೂರಿನಲ್ಲಿ 2,08,275 ಮತದಾರರಿದ್ದು, ಪ್ರಸ್ತುತ ಈ ಸಂಖ್ಯೆ 2,12,753. ಸುಳ್ಯದಲ್ಲಿಯೂ ಹೊಸ ಮತದಾರರ ಸೇರ್ಪಡೆಯಾಗಿದೆ. ಇಲ್ಲಿ ಹಿಂದೆ 2,01,976 ಮತದಾರರಿದ್ದು, ಪ್ರಸ್ತುತ 2,06,029 ಮತದಾರರಿದ್ದಾರೆ.

    ಉಡುಪಿಯಲ್ಲಿ ಮಹಿಳೆಯರೇ ಹೆಚ್ಚು

    ಉಡುಪಿ ಜಿಲ್ಲೆಯಲ್ಲಿ ಒಟ್ಟು 10,41,672 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 22,471 ಯುವ ಮತದಾರರು. ಮಾರ್ಚ್ ತಿಂಗಳ ಅಂಕಿ ಅಂಶ ಪ್ರಕಾರ 10,29,678 ಮತದಾರರಿದ್ದು, ಇದೀಗ ಪರಿಷ್ಕರಣೆಗೊಂಡ ಅಂತಿಮ ಪಟ್ಟಿಯಲ್ಲಿ 11,994 ಮಂದಿ ಸೇರ್ಪಡೆಗೊಂಡಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ 2,35,668 ಮತದಾರರಿದ್ದಾರೆ. ಚುನಾವಣೆ ಘೊಷಣೆಗೂ ಮುನ್ನ 2,32,723 ಮತದಾರರಿದ್ದರು. ಕುಂದಾಪುರದಲ್ಲಿ 2,09,537 (ಹಳೆಯ ಮತದಾರರ ಪಟ್ಟಿ ಪ್ರಕಾರ 2,07,204), ಉಡುಪಿ 2,16,938 (2,14,650), ಕಾಪು 1,88,952 (1,86,681), ಕಾರ್ಕಳದಲ್ಲಿ 1,90,577 (1,88,410) ಮತದಾರು ಅಂತಿಮ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು. (5,02,836 ಪುರುಷರು, 5,38,823 ಮಹಿಳೆಯರು)

    ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರಿಸಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. ದ.ಕ.ಜಿಲ್ಲೆಯಲ್ಲಿ 43,701 ಹೊಸ ಮತದಾರರ ಸೇರ್ಪಡೆಯಾಗಿದೆ. ಪಟ್ಟಿ ಪರಿಷ್ಕರಣೆ ಸಂದರ್ಭ ಬಹುತೇಕ ಯುವ ಮತದಾರರೇ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅರ್ಹ ಎಲ್ಲರಿಗೂ ಹಕ್ಕು ಚಲಾಯಿಸುವ ಅವಕಾಶ ಸಿಗಬೇಕು ಎಂಬುವುದೇ ಚುನಾವಣಾ ಆಯೋಗದ ಉದ್ದೇಶ.
    – ರವಿಕುಮಾರ್ ಎಂ.ಆರ್ ದ.ಕ.ಜಿಲ್ಲಾಧಿಕಾರಿ /ಚುನಾವಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts