More

    ಸಮಸ್ಯೆ ಇತ್ಯರ್ಥಕ್ಕೆ ಯೋಜನೆ ರೂಪಿಸಲಿ

    ಕುಮಟಾ: ಅರಣ್ಯ ವಾಸಿಗಳ ಸಮಸ್ಯೆಗೆ ಶಾಶ್ವತ ಇತ್ಯರ್ಥಕ್ಕೆ ಸರ್ಕಾರ ಕ್ರಿಯಾಯೋಜನೆ ರೂಪಿಸಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಆಗ್ರಹಿಸಿದರು.

    ಪಟ್ಟಣದ ಮಾಸ್ತಿಕಟ್ಟೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಅರಣ್ಯ ಹಕ್ಕು ಹೋರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.

    ಚುನಾವಣಾ ಸಂದರ್ಭದಲ್ಲಿ ಮಾತ್ರ ಚರ್ಚೆಗೆ ಬರುವ ಅರಣ್ಯ ಅತಿಕ್ರಮಣದಾರರ ಸಮಸ್ಯೆಯು ಚುನಾವಣೆಯ ನಂತರ ನೇಪಥ್ಯಕ್ಕೆ ಸರಿಯುವುದು ವಿಷಾದಕರ. ಜನಪ್ರತಿನಿಧಿಗಳ ಮತ್ತು ರಾಜಕೀಯ ಪಕ್ಷಗಳ ಇಂತಹ ವರ್ತನೆ ಖಂಡನೀಯ. ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು, ಮಂಜೂರಿ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅರಣ್ಯ ವಾಸಿಗಳು ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಜನಪ್ರತಿನಿಧಿಗಳ ಮಂಜೂರಿಯ ಕಾನೂನಾತ್ಮಕ ಜ್ಞಾನದ ಕೊರತೆಯು ಇದಕ್ಕೆ ಕಾರಣ ಎಂದರು.

    ಜಿಲ್ಲೆಯಲ್ಲಿ 30 ವರ್ಷದ ಅರಣ್ಯವಾಸಿಗಳ ಹೋರಾಟದ ಕುರಿತು ಮತ್ತು ಅರಣ್ಯವಾಸಿಗಳ ಪರವಾಗಿರುವ ಕಾನೂನಾತ್ಮಕ ಅಂಶಗಳನ್ನು ಒಳಗೊಂಡಿರುವ ಸ್ಮರಣ ಸಂಚಿಕೆ ತರಲಾಗುವುದು ಎಂದರು.

    ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಪಟಗಾರ ಹೆಗಡೆ, ಮಹೇಂದ್ರ ನಾಯ್ಕ ಕತಗಾಲ, ಶಾರಾಬಿ ಬೆಟ್ಕುಳಿ, ಯಾಕೂಬ ಸಾಬ ಬೆಟ್ಕುಳಿ, ಜಗದೀಶ ಹರಿಕಾಂತ ನುಷಿಕೋಟೆ, ಪ್ರೇಮಾ ನಾಯ್ಕ ಮಿರ್ಜಾನ, ಈಶ್ವರ ಮರಾಠಿ ಬಂಗಣೆ, ಸೀತಾರಾಮ ನಾಯ್ಕ ಬೊಗ್ರಿಬೈಲ್, ಪರಶುರಾಮ ಕರಿಕಟ್ಟಿ ಹೆಗಡೆ, ಜಾನ್ ಮಿರ್ಜಾನ, ಸುರೇಶ ನಾಯ್ಕ ಕೋಡಕಣಿ ಇತರರು ಇದ್ದರು.

    ಅರಣ್ಯ ಹಕ್ಕು ಕಾಯ್ದೆ ಮಂಜೂರಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಕಾಯ್ದೆ ಅನುಷ್ಠಾನಕ್ಕೆ ಗ್ರಹಣ ಹಿಡಿದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 85,575 ಅರ್ಜಿಗಳು ಅರಣ್ಯ ಹಕ್ಕು ಕಾಯ್ದೆಯಲ್ಲಿ ಸಲ್ಲಿಸಿದ್ದು, ಇವುಗಳ ಅಂತಿಮ ವಿಚಾರಣೆ ಮುಗಿಯುವುದು ಯಾವಾಗ? ಆದ್ದರಿಂದ ಶೀಘ್ರ ಮಂಜೂರಿ ಪ್ರಕ್ರಿಯೆ ನೀಡುವ ಅವಶ್ಯಕತೆ ಇದೆ.

    | ಎ.ರವೀಂದ್ರ ನಾಯ್ಕ

    ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ

    ==============<p

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts