More

    ಮಹಿಳೆಯರು ಸ್ವಶಕ್ತಿ ಅರಿಯಲಿ – ಸ್ತ್ರೀಯರಿಂದ ಬೃಹತ್ ಜಾಥಾ

    ರಬಕವಿ/ಬನಹಟ್ಟಿ: ಮಹಿಳೆಯರು ಅಬಲೆಯರಲ್ಲ. ತಮ್ಮ ಶಕ್ತಿಯನ್ನು ಅರಿತು ಸಬಲರಾಗುವತ್ತ ಗಮನ ಹರಿಸಬೇಕಿದೆ ಎಂದು ಬನಹಟ್ಟಿ ದಿವಾಣಿ ನ್ಯಾಯಾಧೀಶೆ ಸುಷ್ಮಾ ಟಿ.ಸಿ. ಹೇಳಿದರು.

    ಬನಹಟ್ಟಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಮಹಿಳಾ ವಿದ್ಯಾರ್ಥಿನಿಯರ ಸಹಯೋಗದಲ್ಲಿ ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸಮಾಜ ಹೇಗೆ ಇರಬೇಕು ಎಂದು ಬಯಸುತ್ತೇವೆಯೋ ಅದರಂತೆ ನಾವು ಮೊದಲು ಬದುಕಿ ತೋರಿಸಬೇಕು. ಮನೆಯಲ್ಲಿ ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದರು.

    ರಜನಿ ಶೇಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಜೀವಿಗಳಾದ ಸಾವಿತ್ರಿ ಗುಣಕಿ ಹಾಗೂ ಸರಸ್ವತಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಉಮಾ ಭದ್ರನ್ನವರ ಅಧ್ಯಕ್ಷತೆ ವಹಿಸಿದ್ದರು. ಕಲಾ ಪತ್ತಾರ ಸ್ವಾಗತಿಸಿದರು. ಮಾಲಾ ಭಾವಲತ್ತಿ ನಿರೂಪಿಸಿದರು. ಶಾಂತಾ ಸೋರಗಾಂವಿ ವಂದಿಸಿದರು.

    ಡೊಳ್ಳಿನ ಕುಣಿತ ಹಾಗೂ ವೀರ ಮಹಿಳೆಯರ ವೇಷ ಭೂಷಣದೊಂದಿಗೆ ನಡೆದ ಸಾವಿರಾರು ಮಹಿಳೆಯರ ಆಕರ್ಷಕ ಜಾಥಾ ಬನಹಟ್ಟಿ ನಗರದ ಎಸ್‌ಆರ್‌ಎ ಮೈದಾನದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಜಾಥಾಕ್ಕೆ ನಗರದ ತುಂಬೆಲ್ಲ ಮಹಿಳೆಯರು ರಂಗೋಲಿ ಬಿಡಿಸಿ ಅಭೂತಪೂರ್ವ ಸ್ವಾಗತ ಕೋರಿದರು.

    ಮಾಜಿ ಸಚಿವೆ ಉಮಾಶ್ರೀ, ಗೌರಿ ಭದ್ರನ್ನವರ, ಅನುರಾಧಾ ಹೊರಟ್ಟಿ, ರಜನಿ ಶೇಠೆ, ಜಯಶ್ರೀ ಭದ್ರನ್ನವರ, ಹೇಮಲತಾ ಪಟ್ಟಣ, ವಿದ್ಯಾ ದಬಾಡಿ, ಶಾಂತಾ ಮಂಡಿ, ಅಶ್ವಿನಿ ಪಿಟಗಿ, ಮೀನಾಕ್ಷಿ ಸವದಿ, ಗೌರಿ ಮಿಳ್ಳಿ, ಕಲ್ಪನಾ ಕಮಿತ್ಕರ, ರೇಖಾ ಮಂಡಿ, ಡಾ.ಅನಂತಮತಿ ಯಂಡೋಳಿ, ಡಾ.ಜ್ಯೋತಿ ಚಿತ್ತರಗಿ, ಜ್ಯೋತಿ ಗಾಯಕವಾಡ, ಸಾವಿತ್ರಿ ಕಾಡದೇವರ, ಲಲಿತಾ ಪತ್ತಾರ, ಪೂರ್ಣಿಮಾ ಆಳಗಿ, ವಂದನಾ ಪತ್ತಾರ, ಶೈಲಜಾ ಮಿರ್ಜಿ, ಸುವರ್ಣ ಜಾಡಗೌಡ, ವೈಷ್ಣವಿ ಬಾಗೇವಾಡಿ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts