More

    ಸಂವಿಧಾನದ ಮೌಲ್ಯವನ್ನು ಗೌರವಿಸೋಣ

    ಗೊಳಸಂಗಿ: ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ಧಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವಣೆಯಾಗಿದ್ದು, ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶಗಳ ತತ್ವವಾಗಿದೆ. ಆದ್ದರಿಂದ ಇದನ್ನು ಎಲ್ಲರೂ ಗೌರವಿಸೋಣ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ ಹೇಳಿದರು.

    ಸಮೀಪದ ತಳೇವಾಡ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಬುಧವಾರ ಜರುಗಿದ ಸಂವಿಧಾನ ರಥಯಾತ್ರೆಯ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

    ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಸಂಗಮೇಶ ಪೂಜಾರಿ, ಪಿಡಿಒ ಬಿ.ಜಿ. ಹಳ್ಳಿ, ಗಣಕಯಂತ್ರ ನಿರ್ವಾಹಕ ಬಸವರಾಜ ಹುಬ್ಬಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಿರ್ಮಲಾ ಸುರಪುರ, ಉಪಾಧ್ಯಕ್ಷ ಜಿ.ಬಿ. ಕೋಲಗೊಂಡ, ಸದಸ್ಯರಾದ ಮಲ್ಲಿಕಾರ್ಜುನ ಕುಂಬಾರ, ಕಾರ್ಯದರ್ಶಿ ಎ.ಎಸ್. ಹನಗಂಡಿ, ವಿವಿಧ ಶಾಲಾ ಶಿಕ್ಷಕರು, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರು ಇದ್ದರು.

    ತಳೇವಾಡ ಗ್ರಾಮಕ್ಕೆ ಸಂವಿಧಾನದ ರಥಯಾತ್ರೆ ಆಗಮಿಸುತ್ತಿದ್ದಂತೆಯೇ ವಿವಿಧ ಶಾಲಾ ಮಕ್ಕಳು, ಕಲಾತಂಡಗಳು ಬಗೆಬಗೆಯ ಹಾಡು, ಗುಂಪು ನೃತ್ಯ, ಕೋಲಾಟ ಮೊದಲಾದ ಸಾಂಪ್ರದಾಯಿಕ ಶೈಲಿಯ ಕಲಾ ಪ್ರದರ್ಶನದೊಂದಿಗೆ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts