More

    ದೇಶದ ಅಭಿವೃದ್ಧಿಗೆ ಯುವಕರು ಕೊಡುಗೆ ನೀಡಲಿ

    ಬಾಗಲಕೋಟೆ: ಜಾಗತಿಕ ಮಟ್ಟದಲ್ಲಿ ಮೂರನೆಯ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಭಾರತವನ್ನು ಮತ್ತೆ ಜಗದ್ಗುರುವಾಗಲು ಯಾವ ರೀತಿಯಾಗಿ ಕೊಡುಗೆ ನೀಡಬಹುದು ಎಂದು ಯುವಜನತೆ ಚಿಂತನೆ ಮಾಡಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಶ್ರೀನಿವಾಸ ಪಾಟೀಲ ಹೇಳಿದರು.

    ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅಭ್ಯುದಯ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಕಲ್ಪನಾ-2047 ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಾಧನೆಗೆ ಹಲವು ಅವಕಾಶಗಳಿದ್ದು, ಯುವಜನತೆ ಉದ್ಯೋಗಿಗಳಾಗದೆ ಉದ್ಯೋಗಗಳನ್ನು ಸೃಷ್ಟಿ ಮಾಡುವುದರ ಮೂಲಕ ಸದೃಢ ಭಾರತವನ್ನು ನಿರ್ಮಾಣ ಮಾಡುವ ಸಂಕಲ್ಪ ತೊಡಬೇಕು. ನಾವು ಈಗಲೂ ಅನುಸರಿಸುತ್ತಿರುವ ಮೆಕಾಲೆ ಶಿಕ್ಷಣ ಪದ್ಧತಿಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಕೌಶಲ ಆಧಾರಿತ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಕೌಶಲ ರಹಿತಪದವಿಗೆ ಬೆಲೆ ಇಲ್ಲ ಎಂದರು.

    ಬಹುರಾಷ್ಟ್ರೀಯ ಕಂಪನಿಗಳಿಂದ ಸಾಮಾಜಿಕ ವ್ಯವಸ್ಥೆ ಹಾಳಾಗಿದೆ. ಸಾವಿರಾರು ಉದ್ದಿಮೆಗಳು ಮುಚ್ಚಿಹೋಗಿವೆ. ಯುವಕರು ಇಂತಹ ಸಂಗತಿಗಳನ್ನು ಅರಿತು ಸ್ವದೇಶಿ ವಸ್ತುಗಳತ್ತ ಗಮನ ಹರಿಸಬೇಕು ಎಂದರು.

    ಪ್ರಾಚಾರ್ಯ ಶ್ರೀನಿವಾಸ ನರಗುಂದ, ವಿದ್ಯಾರ್ಥಿಗಳು ದೇಶದ ನೈಜ ಇತಿಹಾಸವನ್ನು ಅರಿಯಬೇಕು. ದೇಶದ ಬಗ್ಗೆ ಹೆಮ್ಮೆ ಮತ್ತುಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಸ್ವಾತಂತ್ರೃ ಹೋರಾಟಗಾರರು ಹಾಗೂ ಹಲವು ಮಹಾತ್ಮರ ವ್ಯಕ್ತಿತ್ವದಿಂದ ಪ್ರೇರಣೆ ಪಡೆದು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.

    ಸ್ವಪ್ನಾ ಗೌಡರ ಪ್ರಾರ್ಥಿಸಿದರು. ಸಂಯೋಜಕ ಡಾ.ಎಚ್.ಎಸ್.ಗಿಡಗಂಟಿ ಸ್ವಾಗತಿಸಿದರು. ಉಪನ್ಯಾಸಕ ಎಸ್.ವೈ.ಬೊಮ್ಮಣ್ಣವರ ನಿರೂಪಿಸಿದರು. ಡಾ.ವಿ.ಎಸ್.ಮಠ, ಎ.ಎಸ್.ಲಿಗಾಡೆ, ಬಿ.ಎ್.ಟೊಂಗಳೆ, ಸವಿತಾ ಜಾವೂರ, ಆನಂದ ಕುಂಬಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts