More

    ಜಮಖಂಡಿಯಲ್ಲೇ ವಿಶ್ವವಿದ್ಯಾಲಯ ಸ್ಥಾಪಿಸಲಿ : ಓಲೇಮಠದ ಡಾ. ಚನ್ನಬಸವ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯ

    ಜಮಖಂಡಿ: ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ನಗರವಾಗಿ ಬೆಳೆಯುತ್ತಿರುವ ಐತಿಹಾಸಿಕ ಇತಿಹಾಸವುಳ್ಳ ಜಮಖಂಡಿಯಲ್ಲೇ ಸರ್ಕಾರ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಓಲೇಮಠದ ಡಾ. ಚನ್ನಬಸವ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಸ್ಥಾನಿಕರ ಕಾಲದಿಂದಲೂ ಜಮಖಂಡಿ ಜಿಲ್ಲಾ ಕೇಂದ್ರವಾಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ, ಜಿಲ್ಲಾ ಕೇಂದ್ರ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನಿಸಿದರೂ ಸರ್ಕಾರದ ನಿರ್ಲಕ್ಷ್ಯ ಭಾವನೆ ಮತ್ತು ಹುಂಡೇಕಾರ, ಗದ್ದಿಗೌಡರ ವರದಿ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಜಿಲ್ಲಾ ವಿಂಗಡನೆಯಲ್ಲಿ ಜಮಖಂಡಿಗೆ ಅನ್ಯಾಯವಾಗಿದೆ. ಜಮಖಂಡಿ ಉಪ ವಿಭಾಗವಾಗಿರುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ವಿಶ್ವ ವಿದ್ಯಾಲಯವನ್ನು ಜಮಖಂಡಿಯಲ್ಲೇ ಸ್ಥಾಪಿಸಬೇಕು ಎಂದರು.

    ಸರ್ಕಾರದ ಮಲತಾಯಿ ಧೊರಣೆ ಕೂಗು ಈ ಭಾಗದ ಜನರಲ್ಲಿ ಬಾರದ ನಿಟ್ಟಿನಲ್ಲಿ ಜಮಖಂಡಿಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಬೇಕು, ವಿಶ್ವವಿದ್ಯಾಲಯಕ್ಕೆ ಬೇಕಾದ ಎಲ್ಲ ಕಟ್ಟಡ ಸಂಪನ್ಮೂಲ ಇಲ್ಲಿದೆ. ಜಮಖಂಡಿಯಲ್ಲೆ ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂಬುದು ಸಾಮೂಹಿಕ ಒತ್ತಾಸೆ. ಅಲ್ಲದೇ ಬಾಗಲಕೋಟೆ ಜಿಲ್ಲಾ ಕೇಂದ್ರ ದೂರಾಗಿರುವುದರಿಂದ ಈ ಭಾಗದ ಜನರಿಗೆ ಅಲ್ಲಿಗೆ ಹೋಗಿ ಬರಲು ಆರ್ಥಿಕ ಹೊರೆಯಾಗುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts