More

    ಪರಿಸರ ಉಳಿಸುವತ್ತ ವಿದ್ಯಾರ್ಥಿಗಳು ಗಮನಹರಿಸಲಿ

    ಮದ್ದೂರು: ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಜಲಕ್ಷಾಮ ಕಾಣಿಸಿಕೊಳ್ಳುತ್ತಿದ್ದು ಜಲ ಹಾಗೂ ಪರಿಸರದ ಸಂರಕ್ಷಣೆ ದೃಷ್ಟಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗಿಡಗಳನ್ನು ನೆಡಬೇಕಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಕೆ.ಬೈರೇಗೌಡ ಸಲಹೆ ನೀಡಿದರು.

    ತಾಲೂಕಿನ ಗೆಜ್ಜಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರಿಸರ ಉಳಿಸುವ ಮತ್ತು ಬೆಳಸುವ ಪ್ರವೃತ್ತಿಯನ್ನು ಬೆಳಸಿಕೊ ಳ್ಳಬೇಕು. ಪರಿಸರ ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

    ಸ್ಕೌಟ್ಸ್ ಮತ್ತು ಮತ್ತು ಗೈಡ್ಸ್‌ನ ಸ್ಥಳೀಯ ಘಟಕದ ಉಪಾಧ್ಯಕ್ಷ ಹುಣಸೇಮರದ ದೊಡ್ಡಿ ಸ್ವಾಮಿ, ಗೈಡ್ ಕ್ಯಾಪ್ಟನ್ ಶಿವಕುಮಾರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಮ್ಮ, ಶಿಕ್ಷಕಿಯರಾದ ಶೋಭಾ, ನವೀನಾ, ವೆಂಕಟರತ್ನ, ಆಶಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts