More

    ಮಣ್ಣಿನ ಸಂಸ್ಕೃತಿ ಉಳಿಸಿ-ಬೆಳೆಸೋಣ, ಶಾಸಕ ಶರತ್ ಬಚ್ಚೇಗೌಡ ಕರೆ, ಹಸಿಗನಾಳದಲ್ಲಿ ಸುಗ್ಗಿ ಹುಗ್ಗಿ ಸಂಭ್ರಮ

    ಸೂಲಿಬೆಲೆ: ಕಾಲಚಕ್ರ ಉರುಳಿದಂತೆ ಗ್ರಾಮೀಣ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

    ಹೋಬಳಿಯ ಹಸಿಗಾಳದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಏರ್ಪಡಿಸಿದ್ದ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹಿಂದಿನ ಕಾಲದಲ್ಲಿ ರೈತರು, ಬೆಳೆಯನ್ನು ಹೊಲದಿಂದ ಮನೆಗೆ ತರುವಾಗ ಸುಗ್ಗಿ ಹಬ್ಬವೆಂದು ಸಂಭ್ರಮಿಸುತ್ತಿದ್ದರು. ಆದರೆ ಈಗಿನ ಯಾಂತ್ರೀಕೃತ ಬದುಕಿನಲ್ಲಿ ಎಲ್ಲವನ್ನು ಮರೆತ್ತಿದ್ದೇವೆ. ಇನ್ನಾದರೂ ನಮ್ಮ ನೆಲದ ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರೂ ಮುಂದಾಗೋಣ ಎಂದರು.

    ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಜಾನಪದ ಹಾಡುಗಳು ನಶಿಸುತ್ತಿದ್ದು, ಇನ್ನಾದರೂ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಪೂರ್ವಜರು ಅನುಸರಿಸಿಕೊಂಡು ಬಂದಿರುವ ಆಚಾರ ವಿಚಾರ ತಿಳಿದು ಅನುಸರಿಸಬೇಕು. ಮಕ್ಕಳಿಗೂ ಹಬ್ಬದ ವಿಶೇಷತೆ ತಿಳಿಸಬೇಕು ಎಂದರು.

    ಸಭಾ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾ ತಂಡಗಳೊಂದಿಗೆ ಮೆರವಣೆ ಬರಲಾಯಿತು. ವೇದಿಕೆಯಲ್ಲಿ ಜಾನಪದ ಗೀತ ಗಾಯನ, ನೃತ್ಯರೂಪಕ, ನೀಲಗಾರರ ಪದಗಳು, ತೊಗಲುಗೊಂಬೆ ಪ್ರಸರ್ಶನ, ರಂಗೋಲೆ ಸ್ಪರ್ಧೆ, ಹಾಡುಗಾರಿ, ಚಿತ್ರ ಕಲೆ, ಉಪನ್ಯಾಸ, ಮಹಿಳಾ ಕವಿಗೋಷ್ಠಿ, ರಾಷ್ಟ್ರಮಟ್ಟದಲ್ಲಿ ಪ್ರತಿಭೆ ತೋರಿದ ಮಹಿಳೆಯರಿಗೆ ಸನ್ಮಾನ, ವಿಚಾರ ಸಂಕೀರಣ ಏರ್ಪಡಿಸಲಾಗಿತ್ತು.

    ತಾಪಂ ಸದಸ್ಯರಾದ ಡಿ.ಟಿ ವೆಂಕಟೇಶ್, ಎಚ್.ಎಸ್.ಮಂಜುನಾಥ, ಗ್ರಾಪಂ ಪಿಡಿಒ ಶ್ರುತಿ, ಯಾದವ ಮಹಾಸಭಾಧ್ಯಕ್ಷ ಆನಂದಪ್ಪ
    ಹಸಿಗಾಳ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts