More

    ಅಂಚೆ ಇಲಾಖೆ ಪಿಂಚಣಿ ವ್ಯವಸ್ಥೆ ಮಾದರಿಯಾಗಲಿ…

    ಕೇಂದ್ರ ನೌಕರರಿಗೆ ನಿವೃತ್ತರಾದ ದಿನವೇ ಪಿಂಚಣಿ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತಂತೆ ಹಲವಾರು ಕಾರ್ಯಸೂಚಿಗಳನ್ನು ತಯಾರು ಮಾಡಿದೆ. ಆದರೆ, ಅಂಚೆ ಇಲಾಖೆಯಲ್ಲಿ ಈಗಾಗಲೇ ಇಂಥದ್ದೊಂದು ವ್ಯವಸ್ಥೆ ಜಾರಿಯಲ್ಲಿದೆ. ಅಂಚೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ನಿವೃತ್ತರಾದ ದಿನವೇ ಪಿಂಚಣಿ, ಡಿಸಿಆರ್​ಜಿ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದು ಕಳೆದ 20 ವರ್ಷಗಳಿಂದ ನಡೆಯುತ್ತಿದೆ. ಅನಿವಾರ್ಯ ಕಾರಣದಿಂದ ಸ್ವಯಂನಿವೃತ್ತಿ ಪಡೆದವರಿಗೆ ಮತ್ತು ಶಿಕ್ಷೆಯಾಗಿ ಕಡ್ಡಾಯ ಸ್ವಯಂನಿವೃತ್ತಿ ಹೊಂದುವವರಿಗೆ ಈ ಸೌಲಭ್ಯಗಳು ಕೂಡಲೇ ಸಿಗುವುದಿಲ್ಲ. ಆದರೆ, ಉಳಿದ ಸಿಬ್ಬಂದಿಗೆ ನಿವೃತ್ತಿ ದಿನದಂದೇ ಪ್ರಾಪ್ತವಾಗುತ್ತವೆ.

    ಬೆಂಗಳೂರಿನ ಸಿಬ್ಬಂದಿ ಯಾವುದೇ ಅಂಚೆ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರೂ, ಕರ್ತವ್ಯದ ಕೊನೆಯ ದಿನ ಅವರನ್ನು ಮುಖ್ಯ ಕಚೇರಿಗೆ ಆಹ್ವಾನಿಸಲಾಗುತ್ತದೆ. ಇಷ್ಟು ವರ್ಷಗಳ ಕಾರ್ಯಕ್ಕೆ ಕೃತಜ್ಞತೆ ರೂಪದಲ್ಲಿ, ಗೌರವವನ್ನು ಅರ್ಪಿಸಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ಪಿಂಚಣಿ ದಾಖಲೆಗಳನ್ನು ವಲಯ ಮುಖ್ಯಸ್ಥರೇ ನೀಡುತ್ತಾರೆ. ಇಲಾಖಾ ವಾಹನದಲ್ಲೇ ಗೌರವ ಪೂರ್ವಕವಾಗಿ ಮನೆಗೆ ಬಿಟ್ಟುಬರುವ ಸಂಪ್ರದಾಯವೂ ಇದೆ. ಇಲ್ಲಿ ಯಾವುದೇ ರೀತಿಯ ವಶೀಲಿಬಾಜಿಗೆ ಅವಕಾಶವಿಲ್ಲ. ಹಾಗಾಗಿ, ಈ ಪದ್ಧತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ನೌಕರರಿಗೆ ಅನ್ವಯ ಮಾಡುವುದು ಸೂಕ್ತ.

    | ಅಕ್ಕಿಹೆಬ್ಬಾಳು ವೆಂಕಟೇಶ ನಿವೃತ್ತ ಸಹಾಯಕ ನಿರ್ದೇಶಕರು, ಅಂಚೆ ಇಲಾಖೆ, ಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts