More

    ದೇಶದಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಲಿ – ತಹಸೀಲ್ದಾರ್ ಶ್ರೀಧರ ಗೋಟೂರ ಹೇಳಿಕೆ

    ತಾಳಿಕೋಟೆ: ದೇಶದಲ್ಲಿ 125 ಕೋಟಿ ಜನಸಂಖ್ಯೆಯಲ್ಲಿ ಶೇ.5 ರಷ್ಟು ಕ್ರೀಡಾಸಕ್ತರಿದ್ದಾರೆ. ವಿದೇಶಿಗರಂತೆ ನಮ್ಮಲ್ಲೂ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಬೇಕು ಎಂದು ತಾಳಿಕೋಟೆ ತಹಸೀಲ್ದಾರ್ ಶ್ರೀಧರ ಗೋಟೂರ ತಿಳಿಸಿದರು.

    ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆ ಆವರಣದಲ್ಲಿ ಪಪೂ ಶಿಕ್ಷಣ ಇಲಾಖೆ, ಎಚ್.ಎಸ್.ಪಾಟೀಲ ಸ್ವತಂತ್ರ ಪಪೂ ಮಹಾವಿದ್ಯಾಲಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ಕ್ರೀಡೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ ಓಲಂಪಿಕ್ ಕ್ರೀಡೆಯಲ್ಲೂ ಚಿನ್ನದ ಪದಕ ಪಡೆದವರಲ್ಲಿ ವಿದೇಶಿಗರ ಸಂಖ್ಯೆಯೇ ಹೆಚ್ಚಿದೆ. ಕ್ರೀಡೆಗಳಿಂದ ಶಿಸ್ತು ಹಾಗೂ ದೇಹ ಸದೃಢಗೊಳ್ಳುತ್ತದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ತಾಲೂಕು ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಆಸಕ್ತಿ ತೋರುವಂತಾಗಬೇಕು. ಕ್ರೀಡಾ ಮನೋಭಾವ ವಹಿಸಿಕೊಂಡು ನಿರ್ಣಾಯಕರ ನಿರ್ಣಯದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

    ಜಿ.ಟಿ.ಘೋರ್ಪಡೆ ಮಾತನಾಡಿದರು. ಎಸ್.ಎಸ್.ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಭೀಮಣ್ಣ ಅರಕೇರಿ ವಚನ ಬೋಧಿಸಿದರು. ಮುಖ್ಯಶಿಕ್ಷಕ ಅಶೋಕ ಕಟ್ಟಿ, ಪ್ರಾಚಾರ್ಯ ಎಂ.ಎಸ್. ಬಿರಾದಾರ, ಡಾ.ಎಚ್.ಬಿ.ನಡುವಿನಕೇರಿ, ಜೆ.ಎಂ.ಕೊಣ್ಣೂರ, ರೇಖಾ ಪಾಟೀಲ, ಸುವರ್ಣಾ ಬಿದರಕುಂದಿ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಎಸ್.ಸಿ.ಗುಡಗುಂಟಿ, ಸಿ.ಎಂ.ಹಳ್ಳೂರ, ವಿ.ಎ.ವಿಜಾಪುರ, ಎಸ್.ಎಸ್.ಪಾಟೀಲ ಇತರರಿದ್ದರು.

    ಉಪನ್ಯಾಸಕ ಪ್ರಕಾಶ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಬಿ.ಐ.ಹಿರೇಹೊಳಿ ನಿರೂಪಿಸಿದರು. ಕಲಕೇರಿ, ಬಳಗಾನೂರ, ಮಿಣಜಗಿ ಕ್ರಾಸ್ ಶಾಲೆ, ಎಸ್.ಕೆ.ಬಾಲಕರ ಹಾಗೂ ಬಾಲಿಕಿಯರ ಶಾಲೆ ಕ್ರೀಡಾಪಟುಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts