More

    ನವದಂಪತಿ ಅನ್ಯೋನ್ಯ ಜೀವನ ಸಾಗಿಸಲಿ

    ಲಕ್ಷೆ್ಮೕಶ್ವರ: ಸಾಮೂಹಿಕ ವಿವಾಹ ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸಬಾರದು. ಅದು ಜೀವನದ ಸಾರ್ಥಕ ಕ್ಷಣವಾಗಿರುತ್ತದೆ ಎಂದು ಸವಣೂರ ದೊಡ್ಡಹುಣಸೇಮಠದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
    ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿವಾಹ ಬಂಧನವೆಂದರೆ ಎರಡು ಮನಸು, ಜೀವಗಳು ಒಂದಾಗಿ ಪರಸ್ಪರರು ಹಾಲುಜೇನಿನಂತೆ ಅನ್ಯೋನ್ಯದಿಂದ ಜೀವನ ಸಾಗಿಸುವ ಪವಿತ್ರ ಬಂಧವಾಗಿದೆ. ನವದಂಪತಿ ತಂದೆ- ತಾಯಿ, ಅತ್ತ್ತೆ-ಮಾವ, ಗುರು- ಹಿರಿಯರಲ್ಲಿ ವಿಧೇಯತೆ ತೋರಬೇಕು ಎಂದರು.
    ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ‘ಹೂವಿನಶಿಗ್ಲಿ ವಿರಕ್ತಮಠವು ತ್ರಿವಿಧ ಸೇವೆ, ಧಾರ್ವಿುಕ, ಚಟುವಟಿಕೆ ಕೈಗೊಳ್ಳುತ್ತಿದೆ’ ಎಂದರು.
    ಗುಡ್ಡದಆನ್ವೇರಿ ಮಠದ ಶಿವಯೋಗೀಶ್ವರ ಮಹಾಸ್ವಾಮೀಜಿ ನೇತೃತ್ವ ವಹಿಸಿದ್ದರು. ಲಕ್ಷೆ್ಮೕಶ್ವರದ ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಪ್ರಗತಿಪರ ರೈತ ಬಸಣ್ಣ ಬೆಂಡಿಗೇರಿ, ಶಿವಾನಂದ ಕಟ್ಟಿಮನಿ, ಇತರರಿದ್ದರು. ಗುರುಕುಲ ಶಿಕ್ಷಣ ಸಂಸ್ಥೆಗೆ ವಿಶೇಷ ದಾನನೀಡಿದ ಪಟ್ಟಣದ ಪಾಂಡುರಂಗ ಶೇಟ್ ಅವರ ಪುತ್ರ ರಾಘವೇಂದ್ರ ಶೇಟ್ ಹಾಗೂ ಸೋನಾಳದ ಡಾ. ಪರಮೇಶ್ವರ ಬಿರಾದಾರ ಮತ್ತಿತರರಿಗೆ ಶ್ರೀಮಠ ಗುರುರಕ್ಷೆ ನೀಡಲಾಯಿತು. ಬೂದಿಹಾಳದ ಗವಿಸಿದ್ಧ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮಹಾದೇವ ಬಿಷ್ಟಣ್ಣವರ, ಕೆ.ಎಸ್. ಇಟಗಿಮಠ, ರೇಣುಕಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts