More

    ಮಕ್ಕಳಲ್ಲಿ ಸಾಹಿತ್ಯದ ಒಲವು ಮೂಡಲಿ

    ಹೊನ್ನಾವರ: ಸಾಹಿತ್ಯ ಕ್ಷೇತ್ರಕ್ಕೆ ಶಿಕ್ಷಕರ ಪಾತ್ರ ದೊಡ್ಡದು ಎಂದು ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಹೇಳಿದರು.

    ತಾಲೂಕಿನ ಹಳದೀಪುರದ ಚಂಡೇಶ್ವರದಲ್ಲಿ ಸಾಕ್ಷಿ ಶಿಕ್ಷಕರ ಬಳಗದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕ ಪಿ.ಆರ್. ನಾಯ್ಕ ಅವರ ಮಕ್ಕಳ ಕವನ ಸಂಕಲನ ‘ಪಾಟಿಚೀಲ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಪಾಟಿಚೀಲ’ ಕವನ ಸಂಕಲನ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವ ಕೃತಿಯಾಗಿದೆ ಎಂದರು.

    ಹಳದೀಪುರ ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾ ರವಿ ಮುಕ್ರಿ ಪಾಟಿಚೀಲ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ನನ್ನ ಬದುಕಿನ ಅಮೂಲ್ಯ ಕ್ಷಣ ಇದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪಾಟಿಚೀಲ ಓದುವುದರ ಮೂಲಕ ಸಾಹಿತ್ಯದ ಒಲವು ಮೂಡಿಸಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಹಲವು ಪ್ರತಿಭಾನ್ವಿತ ಶಿಕ್ಷಕರು ಇರುವುದರಿಂದಲೇ ನಮ್ಮ ತಾಲೂಕು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮುಂದುವರಿದಿದೆ. ಶಿಕ್ಷಕರಿಗೆ ಉತ್ತೇಜಿಸುವ ಚಟುವಟಿಕೆ ‘ಮನೆಯಂಗಳದಲ್ಲಿ ಸಾಕ್ಷಿ’ ಕಾರ್ಯಕ್ರಮದ ಮೂಲಕ ಅನಾವರಣಗೊಳ್ಳುತ್ತಿರುವುದು ಮಾದರಿಯಾದ ಕಾರ್ಯಕ್ರಮ ಎಂದರು.

    ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ರವೀಂದ್ರ ಭಟ್ ಸೂರಿ, ಸುಧೀಶ ನಾಯ್ಕ, ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ, ಗ್ರಾಪಂ ಉಪಾಧ್ಯಕ್ಷ ಅಜಿತ್ ನಾಯ್ಕ ಮಾತನಾಡಿದರು.

    ಕೃತಿಕಾರ ಪಿ.ಆರ್. ನಾಯ್ಕ, ಸಾಕ್ಷಿ ಬಳಗದ ಸಂಚಾಲಕ ಜನಾರ್ದನ ಹರನೀರು, ಪೊ›. ಪ್ರಮೋದ ನಾಯ್ಕ, ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮಮತಾ ನಾಯ್ಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ.ಜಿ. ನಾಯ್ಕ, ಶಿಕ್ಷಕ ಸಂಘದ ಸುರೇಶ ನಾಯ್ಕ, ಪ್ರತಿಮಾ ಹೆಗಡೆ, ಸುಬ್ರಾಯ ಶಾನಭಾಗ, ಕವಿ ನಾಗಪ್ಪ ಗೌಡ, ಸಿಆರ್​ಪಿ ನಾಸೀರ್ ಖಾನ್, ಲುವೇಜಿನ್ ಪಿಂಟೊ, ಎಂ.ಜಿ. ಮೋಗೇರ, ನಾಗರತ್ನ ದೇವಾಡಿಗ, ಶೀಮತಿ ನಾಯ್ಕ, ಶೇಖರ ನಾಯ್ಕ ಗಣೇಶ ಹಳದೀಪುರ, ಎಂ.ಆರ್. ಭಟ್ಟ, ಪದ್ಮಾವತಿ ನಾಯ್ಕ, ರತ್ನಾಕರ ದೇಶಭಂಡಾರಿ, ಸುಭಾಷ ನಾಯ್ಕ, ಬಿ. ಎನ್. ಹೆಗಡೆ, ನಾಗರಾಜ ಪಟಗಾರ, ಸತೀಶ ನಾಯ್ಕ, ಅರುಣಾ ನಾಯ್ಕ, ನಸೀಮಾ ಬಾನು, ಗೀತಾ ಹೊಸೂರ, ಅಮಿತಾ ನಾಯ್ಕ, ಸಂಗೀತ ದೇಶಭಂಡಾರಿ, ಕೃಷ್ಣ ಅಂಬಿಗ, ಪದ್ಮಾವತಿ ನಾಯ್ಕ, ದಿನಕರ ನಾಯ್ಕ, ಇತರರಿದ್ದರು.

    ಕವಿಯಿತ್ರಿ ಮಾದೇವಿ ಗೌಡ ಕೃತಿ ಪರಿಚಯಿಸಿದರು. ಲಕ್ಷ್ಮೀ ಎಚ್. ಪಾಟಿಚೀಲ ಕವನ ಸಂಕಲನದ ಕವಿತೆ ಹಾಡಿದರು. ಶಶಿಧರ ದೇವಾಡಿಗ, ರಾಮ ಗೌಡ, ಶಿಕ್ಷಕಿ ಶಶಿಕಲಾ ನಾಯ್ಕ ಹಾಗೂ ಉಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts