More

    ಕ್ಷಯಮುಕ್ತ ಗ್ರಾಮ ನಿರ್ಮಾಣಗೊಳ್ಳಲಿ : ಡಾ.ಇಂದ್ರಾಣಿ ಸಲಹೆ

    ಬಳ್ಳಾರಿ : ಕ್ಷಯಮುಕ್ತ ಗ್ರಾಮ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಸಲಹೆ ನೀಡಿದರು.

    ತಾಲೂಕಿನ ಹಳೇಮೋಕಾ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ಷಯ ರೋಗದ ಲಕ್ಷಣಗಳ ಬಗ್ಗೆ ಹರಡುವ ರೀತಿ ಹಾಗೂ ಚಿಕಿತ್ಸೆ ಕುರಿತಾದ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆ ಇದ್ದು ಅದರಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಕಫ ಪರೀಕ್ಷೆ ಮಾಡಿದಲ್ಲಿ ಅದರಲ್ಲಿ ಎರಡು ಅಥವಾ ಅದಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಆ ಗ್ರಾಮ ಕ್ಷಯಮುಕ್ತವಾಗುತ್ತಿದೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಮತ್ತು ಸರ್ವ ಸದಸ್ಯರ ಸಹಕಾರದಿಂದ ಆರೋಗ್ಯ ಇಲಾಖೆಯ ಜೊತೆಗೆ ಸಮುದಾಯ ಸಹಾಭಾಗಿತ್ವ ತುಂಬಾ ಮಹತ್ವ ಆಗಿರುತ್ತದೆ. ಸಾಂಕ್ರಾಮಿಕ ರೋಗವನ್ನು ನಮ್ಮ ಗ್ರಾಮದಿಂದ ಮುಕ್ತ ಮಾಡಲು ಸದಾ ನಮ್ಮೆಲ್ಲರ ಸಹಕಾರ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವೈದ್ಯಾಧಿಕಾರಿ ಡಾ.ಭಾರತಿ ಮಾತನಾಡಿ, ಸಕ್ರಿಯ ಕ್ಷಯ ರೋಗದ ಪತ್ತೆ ಆಂದೋಲನ ಯಶಸ್ವಿಗೆ ಆಶಾ ಕಾರ್ಯಕರ್ತೆಯರು ಮತ್ತು ಅರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗು ಪ್ರಾಥಮಿಕ ಸುರಕ್ಷಾ ಅಧಿಕಾರಿಗಳು ಶ್ರಮವಹಿಸಬೇಕಿದೆ. ರಕ್ತ ಹೀನತೆ, ಅಧಿಕ ರಕ್ತದೊತ್ತಡ, ಮಧುಮೇಹ ಇನ್ನು ಇತರ ಕಾಯಿಲೆ ಇರುವವರಿಗೆ ಅರೋಗ್ಯ ತಪಾಸಣೆ ನಡೆಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಡಿ.ರಾಮಣ್ಣ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ಖುರ್ಶಿದ್ ಬೇಗಂ, ಬಿಲ್ ಕಲೆಕ್ಟರ್ ರಾಜಣ್ಣ, ಒಬುಲಾರೆಡ್ಡಿ, ಬಸವರಾಜ್, ಪ್ರಾಥಮಿಕ ಅರೋಗ್ಯ ಸುರಕ್ಷಾ ಅಧಿಕಾರಿ ನಂದಿನಿ, ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಮೊಹಮ್ಮದ್ ಇಶಾಕ್, ಗುರುಸಿದ್ದಪ್ಪ, ಆಶಾ ಸುಗಮಕಾರದ ಪಾವನಿ, ಬಸವರಾಜ್ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts