More

    ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ : ಬೆಂಗಳೂರಿನ ಪ್ರತೀಕ್, ಸುಹಿನಾರಾಯ್ ಚಾಂಪಿಯನ್

    ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾ ಸಮುಚ್ಚಯದಲ್ಲಿ ಕಳೆದ ಆರು ದಿನಗಳಿಂದ ನಡೆದ ಯೊನೆಕ್ಸ್ ಸನ್‌ರೈಸ್ ರಾಜ್ಯಮಟ್ಟದ ಸಬ್‌ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಬುಧವಾರ ಮುಕ್ತಾಯಗೊಂಡಿತು. 15 ವರ್ಷದ ವಿಭಾಗದಲ್ಲಿ ಪ್ರತೀಕ್ (ಬಾಲಕ) ಹಾಗೂ ಸುಹಿನಾ ರಾಯ್ (ಬಾಲಕಿ) ಮತ್ತು 17 ವರ್ಷದ ವಿಭಾಗದಲ್ಲಿ ಅವಿ ಬಸಕ್ (ಬಾಲಕ) ಹಾಗೂ ಜೇಡ್ ಅನಿಲ್ (ಬಾಲಕಿ) ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು.

    15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಪ್ರತೀಕ್ ಕೌಂಡಿಲ್ಯ, ಪ್ರಣವ್ ಎಂ. ಅವರನ್ನು (3-0) ಸೆಟ್ ನಿಂದ 18-21, 21-14, 21-16 ಅಂಕಗಳಿಂದ ಮಣಿಸಿ ಚಾಂಪಿಯನ್ ಆದರು.
    ಬಾಲಕಿಯರ ವಿಭಾಗದಲ್ಲಿ ಸುಹೀನಾ ರಾಯ್, ಅದಿತಿ ದೀಪಕ್ ರಾಜ್ ವಿರುದ್ಧ ನೇರ ಸೆಟ್ ಗಳಿಂದ 21-13, 23-21 ಅಂಕಗಳಿಂದ ಮಣಿಸಿದರು.

    17 ರೊಳಗಿನ ಬಾಲಕರ ವಿಭಾಗದಲ್ಲಿ 15 ವರ್ಷದೊಳಗಿನ ವಿಭಾಗದಲ್ಲಿ ಜಯಹೊಂದಿದ ಪ್ರತೀಕ್ ಕೌಂಡಿಲ್ಯ ಈ ವಿಭಾಗದಲ್ಲಿ ಅವಿ ಬಸಕ್ ವಿರುದ್ಧ ನೇರ ಸೆಟ್‌ಗಳಿಂದ (ಅಂಕಗಳು 17-21 13-21) ಸೋಲುಕಂಡರು.
    ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಜೇಡ್ ಅನಿಲ್‌ಅವರು ಬೆಂಗಳೂರಿನ ಸುಹಿನಾ ರಾಯ್ ಅವರನ್ನು ನೇರ ಸೆಟ್ ಗಳಲ್ಲಿ 21-18, 21-15 ಅಂಕಗಳಿಂದ ಮಣಿಸಿದರು.

    15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಪ್ರತೀಕ್ ಕೌಂಡಿಲ್ಯ, ಪ್ರಣವ್ ಎಂ. ಅವರನ್ನು (3-0) ಸೆಟ್ ನಿಂದ 18-21, 21-14, 21-16 ಅಂಕಗಳಿಂದ ಮಣಿಸಿ ಚಾಂಪಿಯನ್ ಆದರು.
    ಬಾಲಕಿಯರ ವಿಭಾಗದಲ್ಲಿ ಸುಹಿನಾ ರಾಯ್, ಅದಿತಿ ದೀಪಕ್ ರಾಜ್ ವಿರುದ್ಧ ನೇರ ಸೆಟ್ ಗಳಿಂದ 21-13, 23-21 ಅಂಕಗಳಿಂದ ಮಣಿಸಿದರು.

    ಮಿಶ್ರ ಡಬಲ್ಸ್ನಲ್ಲಿ 15 ವರ್ಷದೊಳಗಿನ ಅಮಿತ್ ರಾಜ್ ಮತ್ತು ಇಷಿಕ ಕಶ್ಯಪ್ ಅವರು ಪ್ರದ್ಯುಮ್ನ ಮತ್ತು ಲಕ್ಷೃ ರಾಜೇಶ್ ಅವರನ್ನು 2-1 ಸೆಟ್ (ಅಂಕಗಳು 16-21, 21-14, 21-10) ನಿಂದ ಮಣಿಸಿದರು. 17 ವರ್ಷದೊಳಗಿನ ಸುಮಿತ್ ಎ.ಆರ್ ಮತ್ತು ಅನ್ವಿತಾ ವಿಜಯ್ ಅವರು ಸಿದ್ದಾರ್ಥ ಗುನ್ಟೂರಿ ಹಾಗೂ ಮೌನಿತಾ ಎ.ಎಸ್ ಅವರ ವಿರುದ್ಧ ನೇರ ಸೆಟ್ ಗಳಲ್ಲಿ ಅಂದರೆ 21-13, 21-13 ಅಂಕಗಳಿಂದ ಜಯ ಸಾಧಿಸಿದರು.

    15 ವರ್ಷದೊಳಗಿನ ಬಾಲಕರ ವಿಭಾಗದ ಡಬಲ್ಸ್ನಲ್ಲಿ ಬೆಂಗಳೂರಿನ ಎಸ್‌ಪುನೀತ್ ಮತ್ತು ಎಸ್. ಪವನ್ ಸಹೋದರರ ವಿರುದ್ಧ ಹಾರ್ದಿಕ್ ದಿವ್ಯಾಂಶ ಮತ್ತು ನಟರಾಜ್ ಅವರು 2-1 ಸೆಟ್‌ನಿಂದ (ಅಂಕಗಳು 15-21,21-17,21-18) ಜಯ ಸಾಧಿಸಿದರು.
    17 ವರ್ಷದೊಳಗಿನ ಬಾಲಕರ ಡಬಲ್ಸ್ ಪಂದ್ಯದಲ್ಲಿ ಕ್ರಿಸ್ ಅಂಜೆನ್ , ಸುಮಿತ್ ಎ.ಆರ್ ಹಾಗೂ ಕ್ಷಿತಿಜ್‌ದೀಪಕ್, ಸಂಕೀರ್ತ್.ಪಿ ಅವರನ್ನು ನೇರ ಸೆಟ್‌ನಿಂದ ಅಂದರೆ 21-17, 21-9 ಅಂಕಗಳಿಂದ ಮಣಿಸಿದರು.

    ಬಾಲಕಿಯರ ವಿಭಾಗದಲ್ಲಿ ದಿಯಾ ಭೀಮಯ್ಯ ಮತ್ತು ಜೇಡ್ ಅನಿಲ್ ಅವರು ವ್ರಿದ್ಧಿ ಪೊನ್ನಮ್ಮ ಹಾಗೂ ಅದಿತಿ ದೀಪಕ್‌ರಾಜ್ ಅವರನ್ನು
    ನೇರ ಸೆಟ್‌ನಲ್ಲಿ 21-16, 21-19 ಅಂಕಗಳಿಂದ ಮಣಿಸಿದರು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಜಿಲ್ಲಾ ಅಸೋಸಿಯೇಷನ್ ಮತ್ತು ಜಿಲ್ಲಾ ಆಡಳಿತದ ಸಹಕಾರದಿಂದ ಪಂದ್ಯಾವಳಿ ಹಮ್ಮಿಕೊಳ್ಳಲಾಯಿತು. 2017ರ ನಂತರ ಎರಡನೇ ಬಾರಿಗೆ ರಾಜ್ಯಮಟ್ಟದ ಪಂದ್ಯಾವಳಿ ಬಳ್ಳಾರಿಯಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು. ಪಂದ್ಯಾವಳಿಯಲ್ಲಿ 420 ಆಟಗಾರರು, 742 ಪಂದ್ಯಗಳನ್ನು ಆರು ಅಂಕಣಗಳಲ್ಲಿ ಆಡಿದರು.

    ವಿಜೇತರಿಗೆ ಟ್ರೋಪಿಗಳನ್ನು ಸುಪ್ರ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ.ಸಿಂಗ್, ಜೈರಾಜ್‌ಸ್ಟೀಲ್ನ ಜನರಲ್ ಮ್ಯಾನೇಜರ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಹೊಸಪೇಟೆಮಠ. ಕಾರ್ಯದರ್ಶಿ ರಾಜೇಶ್, ಜಿಲ್ಲಾ ಅಧ್ಯಕ್ಷ ಎಂ.ಅಹಿರಾಜ್, ಉಪಾಧ್ಯಕ್ಷ ರಾಮ್‌ಧೂತ್ ಬಾಬು ಮೊದಲಾದವರು ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts