More

    ಕನ್ನಡದ ಕಟ್ಟಾಳುಗಳಿಗೆ ಉನ್ನತ ಸ್ಥಾನ ದೊರೆಯಲಿ

    ರಾಣೆಬೆನ್ನೂರ: ಕನ್ನಡ ನಾಡು, ನುಡಿ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕನ್ನಡದ ಕೆಲಸ ಮಾಡುವವರಿಗೆ ಉನ್ನತ ಸ್ಥಾನಮಾನ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ ಹೇಳಿದರು.

    ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ಕುಮಾರೇಶ್ವರ ಮಠದ ಬಳಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ವಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ವಿುಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಭವನ ನಿರ್ವಿುಸಲು ಭೂಮಿ ನೀಡಿರುವ ದಾನಿಗಳ ಕೊಡುಗೆ ಶ್ಲಾಘನೀಯವಾಗಿದೆ. ಕರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟದಲ್ಲಿಯೂ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಭವನ ನಿರ್ವಣಕ್ಕೆ ಭೂಮಿ ನೀಡಿದ ಕುಮಾರ ಶಂಕ್ರಿಕೊಪ್ಪ, ಸಿದ್ದಪ್ಪ ಹೊರಕೇರಿ ಅವರನ್ನು ಸನ್ಮಾನಿಸಲಾಯಿತು.

    ಶಾಸಕ ಅರುಣಕುಮಾರ ಪೂಜಾರ, ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ, ಮಾಜಿ ಅಧ್ಯಕ್ಷ ಜಿ.ಬಿ. ಮಾಸಣಗಿ, ತಾಲೂಕು ಅಧ್ಯಕ್ಷೆ ಎ.ಬಿ. ರತ್ನಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾಪಂ ಅಧ್ಯಕ್ಷ ಡಿ.ಎಸ್. ಪಾಟೀಲ, ತಾಪಂ ಸದಸ್ಯೆ ಮಂಗಳಾ ಹೊಟ್ಟಿಗೌಡ್ರ, ಜಿ.ಜಿ. ಹೊಟ್ಟಿಗೌಡ್ರ, ಬಿಇಒ ಎನ್.ಜೆ. ಗುರುಪ್ರಸಾದ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts