More

    ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಭಕ್ತರು ತೆರಳಲಿ

    ಹುನಗುಂದ: ಶ್ರೀರಾಮ ಜನ್ಮಭೂಮಿ ಅಯೋಧ್ಯಾದಲ್ಲಿ ನಿರ್ಮಿಸುತ್ತಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಹೊಸ ವರ್ಷ 2024 ರ ಜ.22ರಂದು ಶ್ರೀ ರಾಮಲಲ್ಲಾ (ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಾಲೂಕಿನಿಂದ ರಾಮಭಕ್ತರು ತೆರಳಬೇಕೆಂದು ವಿ.ಮ. ಸಂಘದ ಗೌರವ ಕಾರ್ಯದರ್ಶಿ, ಖ್ಯಾತ ವೈದ್ಯ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.

    ಅಯೋಧ್ಯಾದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ತಾಲೂಕಿಗೆ ತಲುಪಿದ ಕಳಸ ಮತ್ತು ರಾಮಂದಿರದ ಫೋಟೋ, ಅಕ್ಷತೆ ಕಾಳಿನ ಜತೆಗೆ ಕರಪತ್ರಗಳಿಗೆ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
    ಈ ಅಕ್ಷತೆ ಮತ್ತು ಕರಪತ್ರಗಳನ್ನು ತಾಲೂಕಿನ ಎಲ್ಲ ಗ್ರಾಮಗಳಲ್ಲಿಯ ಪ್ರತಿ ಮನೆಗಳಿಗೆ ತಲುಪಿಸುವುದು ಕಾರ್ಯಕರ್ತರ ಉದ್ದೇಶವಾಗಿದೆ. ಈ ಕುರಿತು ನಮ್ಮ ತಾಲೂಕು ಮತ್ತು ಗ್ರಾಮೀಣದಲ್ಲಿನ ಹಿರಿಯ ಮತ್ತು ಕಿರಿಯ ಹಿಂದು ಕಾರ್ಯಕರ್ತರ ಪರಿಶ್ರಮದಿಂದ ಈ ಹಿಂದು ಸಂಘಟನೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರು.

    ಹಿಂದು ಸಂಘಟನೆ ಮುಖಂಡ ಲಕ್ಷ್ಮಣ ಗಾಯಕವಾಡ ಮಾತನಾಡಿ, ಅಯೋಧ್ಯಾದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ನಮ್ಮ ತಾಲೂಕಿನ ಪ್ರತಿ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮನ ಘೋಷಣೆ ಹಾಕೋಣ ಎಂದರು.
    ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಆನಂದ ನಡುವಿನಮನಿ, ಸಂತೋಷ ಬಡಿಗೇರ, ಪ್ರಶಾಂತ ಐಹೊಳೆ, ಜಗದೀಶ ದಾದ್ಮಿ, ಮಂಜು ಶೇಬಣ್ಣವರ, ಪ್ರವೀಣಕುಮಾರ ಕುರ್ತಕೋಟಿ ಮಲ್ಲು ನೇತೃತ್ವ ವಹಿಸಿದ್ದರು.
    ಮಹೇಶ ಬೆಳ್ಳಿಹಾಳ, ರಮೇಶ ಕಡ್ಲಿಮಟ್ಟಿ, ರಾಜಕುಮಾರ ಬಾದವಾಡಗಿ, ವಿನೋದ ಗಾಯಕವಾಡ, ಈಶ್ವರಪ್ಪ ಹವಾಲ್ದಾರ್ ರಾಜು ಬಡಿಗೇರ, ಗಿರಿಮಲ್ಲಪ್ಪ ಹಳಪೇಟಿ, ಅಪ್ಪು ಆಲೂರ, ರಾಜು ಬಡಿಗೇರ ಮತ್ತಿತರರಿದ್ದರು.

    ಗಚ್ಚಿನಮಠದ ಮಹಾಂತಯ್ಯ ಗಚ್ಚಿನಮಠ ಹೋಬಳಿಮಟ್ಟಕ್ಕೆ ಈ ಅಕ್ಷತೆ ಮತ್ತು ಕರಪತ್ರ ವಿತರಿಸಿದರು. ಸ್ವಯಂ ಸೇವಕರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts