More

    ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿಸಲಿ

    ವಿಜಯಪುರ: ಸಹಕಾರಿ ಸಂಘಗಳ ಆಡಳಿತ ಮಂಡಳಿ ಮತ್ತು ಸಾಲ ಪಡೆಯುವ ಗ್ರಾಹಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಬ್ಯಾಂಕ್‌ಗಳು ಹೆಚ್ಚಿನ ಅಭಿವೃದ್ಧಿಯಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ಬಬಲೇಶ್ವರ ತಾಲೂಕಿನ ಕೊಡಬಾಗಿ ಗ್ರಾಮದಲ್ಲಿ ಗುರುವಾರ ಶ್ರೀಲಕ್ಷ್ಮಿ ವೆಂಕಟೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಮೀಣ ಭಾಗದಲ್ಲಿ ರೈತರಿಗೆ ಭೂಮಿ, ನೀರು, ವಿದ್ಯುತ್ ಅತ್ಯಗತ್ಯ. ಅಲ್ಲದೇ, ಕಷ್ಟದ ಸಂದರ್ಭಗಳಲ್ಲಿ ಅವರಿಗೆ ಸಾಲ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಪ್ರಮುಖವಾಗಿರುತ್ತದೆ. ಉಳ್ಳವರ ಜತೆಗೆ ಬಡವರಿಗೆ, ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಸಂಸ್ಥೆಗಳು ಮಾಡಬೇಕು. ಅದೇರೀತಿ ಸಾಲ ಪಡೆಯುವ ಗ್ರಾಹಕರೂ ಶ್ರದ್ಧೆಯಿಂದ ಸಾಲ ಮರು ಪಾವತಿಸಬೇಕು. ಆಗ ಮಾತ್ರ ಹಣಕಾಸು ಸಂಸ್ಥೆಗಳು ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದರು.

    ಸಹಕಾರಿ ಮತ್ತು ಖಾಸಗಿ ಸೇರಿದಂತೆ ಯಾವುದೇ ಹಣಕಾಸು ಸಂಸ್ಥೆಗಳು ಯಶಸ್ವಿಯಾಗಬೇಕಾದರೆ ಅಲ್ಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಾಮಾಣಿಕವಾಗಿ ಪರಿಶ್ರಮ ಪಡಬೇಕು. ಸಮನ್ವಯದಿಂದ ವ್ಯವಹಾರ ನಿರ್ವಹಣೆ ಮಾಡಬೇಕು. ಶ್ರೀಲಕ್ಷ್ಮಿ ವೆಂಕಟೇಶ ಸೌಹಾರ್ದ ಸಹಕಾರಿ ಸಂಘದ ಪದಾಧಿಕಾರಿಗಳ ಸಾಮರ್ಥ್ಯ ಅಗಾಧವಾಗಿದೆ. ಈ ಸಂಘದಿಂದ ರೈತರಿಗೆ, ಜನರಿಗೆ ಮತ್ತು ಬ್ಯಾಂಕ್‌ಗೆ ಒಳ್ಳೆಯದಾಗಲಿ. ಹೋಬಳಿ ಮಟ್ಟದಲ್ಲಿ ದೊಡ್ಡ ಹೆಸರು ಮಾಡುವಂತಾಗಲಿ ಎಂದರು.

    ಶಾಸಕ ಜೆ.ಟಿ. ಪಾಟೀಲ, ಮರೆಗುದ್ದಿ ದಿಗಂಬರೇಶ್ವರ ಸಂಸ್ಥಾನಮಠದ ಪ್ರಭು ತೋಂಟದಾರ್ಯ ಸ್ವಾಮೀಜಿ, ಮಮದಾಪುರ ವಿರಕ್ತಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ, ಕೊಡಬಾಗಿಯ ಮಹಾದೇವಯ್ಯ ಹಿರೇಮಠ, ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಕೋನಪ್ಪನವರ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ, ಖಾದಿ ಮತ್ತು ಗ್ರಾಮೋದ್ಯೋಗ ಸಂಘದ ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಶಿ, ನಿರ್ದೇಶಕ ಎಚ್.ಬಿ. ಹರನಟ್ಟಿ, ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಮುಖಂಡರಾದ ಗೋವಿಂದಪ್ಪ ಹರನಟ್ಟಿ, ಕೃಷ್ಣಾಜಿ ಕುಲಕರ್ಣಿ, ಬಿ.ಡಿ. ಪಾಟೀಲ, ಕೆ.ಎಚ್. ಮುಂಬಾರೆಡ್ಡಿ, ಶಿವನಗೌಡ ಪಾಟೀಲ, ಸಿ.ಎಚ್. ಲೆಂಡಿ, ಮುತ್ತಪ್ಪ ಶಿವಣ್ಣವರ, ಉಮೇಶ ಮಲ್ಲಣ್ಣವರ, ಮುತ್ತನಗೌಡ ಪಾಟೀಲ, ಮಹಾದೇವಪ್ಪ ಮಧರಖಂಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts