More

    ಸಂವಿಧಾನದ ಆಶಯ ಸಾಕಾರವಾಗಲಿ

    ಧಾರವಾಡ: ಸಂವಿಧಾನ ಎಂಬುದು ವೈವಿಧ್ಯಮಯ, ವಿಶೇಷತೆ ಒಳಗೊಂಡ ವ್ಯಕ್ತಿಗಳನ್ನು ರೂಪಿಸುವ, ಆರೋಗ್ಯಕರ ಸಮಾಜ ನಿರ್ವಿುಸುವ ಮಾರ್ಗದರ್ಶಿ. ಸಂವಿಧಾನವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದು ಸಂಗೀತಗಾರ ಪಂ. ಎಂ. ವೆಂಕಟೇಶಕುಮಾರ ಹೇಳಿದರು.

    ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪ ಹಾಗೂ ಅನುರಾಗ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಒಂದು ಬಾರಿ ಓದಿದರೆ ತಿಳಿಯುವುದಿಲ್ಲ. ಪದೇ ಪದೆ ಓದಿದಾಗ ಮಾತ್ರ ಅದರ ಮರ್ಮ, ಒಳತಿರುಳು ಅರಿಯಲು ಸಾಧ್ಯ. ಸಂವಿಧಾನ ಕುರಿತು ಹೆಚ್ಚೆಚ್ಚು ತಿಳಿದುಕೊಂಡು ಮತ್ತೊಬ್ಬರಿಗೆ ತಿಳಿಸುವ ಪ್ರಯತ್ನ ಮಾಡುವೆ ಎಂದರು.

    ನಮ್ಮ ಸಂವಿಧಾನದ ವೈಶಿಷ್ಟತೆ ವಿಷಯ ಕುರಿತು ರಾಜ್ಯ ಕಾನೂನು ವಿವಿ ಡೀನ್ ಪ್ರೊ. ಸಿ.ಎಸ್. ಪಾಟೀಲ ಮಾತನಾಡಿ, ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವೆಂದು ಜಗತ್ತು ಒಪ್ಪಿದೆ. ಇಂತಹ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾವುಗಳೇ ಉಳಿಯುವುದು ದುಸ್ತರ. ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು. ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಂವಿಧಾನದ ಅರಿವು ಮೂಡಿಸುವ ಜಾಗೃತಿ ಕಾರ್ಯ ಮಾಡಿದಾಗ ಸಂವಿಧಾನದ ಆಶಯಗಳು ಸಶಕ್ತವಾಗುವವು ಎಂದರು.

    ಅಧ್ಯಕ್ಷತೆ ವಹಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಡಾ. ಸದಾಶಿವ ಮರ್ಜಿ ಮಾತನಾಡಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಕಚೇರಿ ಜಂಟಿ ನಿರ್ದೇಶಕ ಅಶೋಕ ಚಲವಾದಿ ಅವರು ಸಂವಿಧಾನ ಪ್ರಸ್ತಾವನೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ. ಹರ್ಷ ಡಂಬಳ, ಶಂಕರ ಹಲಗತ್ತಿ, ಹನುಮಾಕ್ಷಿ ಗೋಗಿ, ಅನಿಲ ಮೇತ್ರಿ, ಹೇಮಂತ ಲಮಾಣಿ, ಪ್ರಕಾಶ ಮಲ್ಲಿಗವಾಡ, ಪರಶುರಾಮ ಚುರಮರಿ, ಸಂತೋಷ ಮಹಾಲೆ, ವಿ.ಎಸ್. ಪತ್ರಿಮಠ, ಜಿ.ಎಸ್. ಅಂಗಡಿ, ಇತರರು ಇದ್ದರು.

    ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಕಾನೂನು ಮಂಟಪದ ಸಂಚಾಲಕ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts