More

    ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲಿ

    ಉಳ್ಳಾಗಡ್ಡಿ-ಖಾನಾಪುರ: ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿದ್ದು, ಶಿಕ್ಷಣದ ಜತೆ ಮಾನವೀಯ ಮೌಲ್ಯ ಹಾಗೂ ಸಂಸ್ಕಾರ ನೀಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಸಮೀಪದ ಹಿಡಕಲ್ ಡ್ಯಾಂ ಲೇಬರ್ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23ನೇ ಸಾಲಿನ ವಿವೇಕ ಯೋಜನೆಯಡಿ ಮಂಜೂರಾದ 14.50 ಲಕ್ಷ ರೂ. ವೆಚ್ಚದ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಮಾನವೀಯ ಮೌಲ್ಯುಯುತ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಿಗುತ್ತಿದೆ. ಸದೃಢ ಭಾರತ ಕಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಾಲೆಗೆ ಮೂಲ ಸೌಕರ್ಯ ಒದಗಿಸಲು ಸದಾ ಸಿದ್ಧ ಎಂದರು.
    ಬಿಇಒ ಪ್ರಭಾವತಿ ಪಾಟೀಲ ಮಾತನಾಡಿದರು.

    ಬೆಳಗಾವಿ ಜಿಲ್ಲಾ ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಸವರಾಜ ಮಟಗಾರ, ಹೊಸಪೇಟ ಗ್ರಾಪಂ ಅಧ್ಯಕ್ಷೆ ಸುಹಾಸಿನಿ ಮಗದುಮ್ಮ, ಉಪಾಧ್ಯಕ್ಷ ಎನ್.ಆರ್.ಖನಗಾಂವಿ, ಸದಸ್ಯರಾದ ಭಾರತಿ ಬೆಣ್ಣಿ, ಶಿವಾನಂದ ಹಿರೇಘೋಳಿ, ಮಹಾನಿಂಗ ಮರೆನ್ನವರ, ಪಿಡಿಒ ಅಮೃತಾ ಶಿರಹಟ್ಟಿ, ರಾಜಗೋಪಾಲ ಮಿತ್ರನ್ನವರ, ಎಚ್.ಬಿ.ನಾಗಪ್ಪಗೋಳ, ಬಸವರಾಜ ಚಿಕ್ಕೋಡಿ, ಪ್ರಕಾಶ ಹೊಸಮನಿ, ರಂದೂಲಖಾನ್ ಬಳೆಗಾರ, ರವಿ ಬೆಣ್ಣಿ, ಶ್ರೀಧರ ಬೆಣ್ಣಿ, ಸಂದೀಪ ಕಲ್ಕುಟಗಿ, ಸುರೇಶ ಪವಾರ, ಅನ್ನಪೂರ್ಣಾ ತಿಪ್ಪಿಮನಿ, ಪಿ.ಬಿ. ಮಗದುಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts