More

    ಸಂಘ, ಸಂಸ್ಥೆಗಳು ಜ್ಞಾನ ವೃದ್ಧಿಸುವ ಕೆಲಸ ಮಾಡಲಿ

    ಯಳಂದೂರು : ಸಂಘ, ಸಂಸ್ಥೆಗಳು ಜ್ಞಾನವನ್ನು ವೃದ್ಧಿಸುವ ಕೆಲಸ ಮಾಡಬೇಕು. ಇದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಸಲಹೆ ನೀಡಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಶ್ರೀ ಭಗವಾನ್ ಬುದ್ಧ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮವನ್ನು ಮಂಗಳವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.

    ಬುದ್ಧ, ಬಸವ, ಅಂಬೇಡ್ಕರ್ ದೇಶ ಕಂಡ ಅದ್ಭುತಗಳು. ಇವರ ಬಗ್ಗೆ ಇಂದಿನ ಪೀಳಿಗೆ ಅಧ್ಯಯನ ಮಾಡುವಂತಹ ಕೆಲಸವನ್ನು ಸಂಘ, ಸಂಸ್ಥೆಗಳು ಮಾಡಬೇಕು. ಇವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಅಧ್ಯಯನಶೀಲರಾಗುವಂತೆ ಪ್ರೇರೇಪಿಸಬೇಕು. ಈ ಸಂಸ್ಥೆ ನಿರ್ವಹಿಸುತ್ತಿರುವ ಗ್ರಂಥಾಲಯ ಒಂದು ಉತ್ತಮ ಕೆಲಸವಾಗಿದೆ. ನಾನು ವೈಯಕ್ತಿಕವಾಗಿ ಇದಕ್ಕೆ 100 ಪುಸ್ತಕಗಳನ್ನು ನೀಡುತ್ತೇನೆ ಎಂದರು.
    ಸಂಗೀತ ಮನಸ್ಸು ಹಾಗೂ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಒಂದು ಉತ್ತಮ ಮಾಧ್ಯಮ. ಇದಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಸಂಸ್ಥೆ ಇನ್ನಷ್ಟು ಮಾಡಲಿ, ಇನ್ನಷ್ಟು ಜಾಗೃತಿ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಲಿ ಎಂದು ಆಶಿಸಿದರು.

    ಸಂಸ್ಥೆಯ ಅಧ್ಯಕ್ಷ ಆರ್. ಕೃಷ್ಣಯ್ಯ, ಪ.ಪಂ. ಸದಸ್ಯ ಕೆ.ಮಲ್ಲಯ್ಯ, ಮಾಜಿ ಸದಸ್ಯ ಜೆ.ಶ್ರೀನಿವಾಸ್, ಟಿಎಪಿಸಿಎಂಎಸ್ ಸದಸ್ಯ ಮಹದೇಶ, ನಾಮನಿರ್ದೇಶಿತ ಸದಸ್ಯ ವೈ.ಬಿ. ನಂಜುಂಡಸ್ವಾಮಿ, ಬಸವರಾಜು, ಎನ್.ರಾಮಯ್ಯ, ಜೆ. ನಾಗರಾಜು, ಬಿ.ಸಿದ್ದರಾಜು, ಶ್ಯಾಮ್‌ಸುಂದರ್, ಎಸ್. ಪುಟ್ಟರಾಜು, ಎ.ಎನ್. ನಾಗೇಮದ್ರ, ಎಂ.ಶಶಿಧರ್, ಚಂದ್ರಶೇಖರ್ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts