More

    ಸಿದ್ಧರಾಮೇಶ್ವರ ವಚನ ಸಂಗ್ರಹ ಕಾರ್ಯವಾಗಲಿ

    ಮುಂಡರಗಿ: ಹನ್ನೆರಡನೇ ಶತಮಾನದ ಶಿವಶರಣ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕ ಜೀವಿಯಾಗಿದ್ದರು. ಅನೇಕ ಕೆರೆ- ಕಟ್ಟೆಗಳನ್ನು ಕಟ್ಟಿಸಿದ್ದರು. ಅವರು ರಚಿಸಿದ ವಚನಗಳು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ ಎಂದು ಭೋವಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ನರೇಗಲ್ಲ ಹೇಳಿದರು.
    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಾಡಳಿತವು ಸೋಮವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ಶಿಕ್ಷಣ ಪಡೆಯಲು ಪ್ರೇರಣೆ ನೀಡುವ ಕೆಲಸ ಆಗಬೇಕು. ಶಿಕ್ಷಣದಿಂದ ಉನ್ನತ ಸ್ಥಾನಮಾನ ದೊರೆಯಲು ಸಾಧ್ಯವಾಗುತ್ತದೆ. ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ ಸಾವಿರಕ್ಕೂ ಹೆಚ್ಚು ವಚನಗಳಷ್ಟೇ ದೊರೆತಿವೆ. ಸರ್ಕಾರ ಸಂಶೋಧನೆ ನಡೆಸಿ ಅವರ ವಚನಗಳನ್ನು ಸಂಗ್ರಹಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
    ತಹಸೀಲ್ದಾರ್ ಧನಂಜಯ ಎಂ. ಅಧ್ಯಕ್ಷತೆ ವಹಿಸಿದ್ದರು. ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ನಿವೃತ್ತ ಉಪನ್ಯಾಸಕ ಎ.ವೈ. ನವಲಗುಂದ, ಪರಶುರಾಮ ಸುಣಗಾರ, ಮಂಜುನಾಥ ದೊಡ್ಡಮನಿ, ಫಕೀರಪ್ಪ ಸಂದಿಮನಿ, ಸುರೇಶ ಬಂಡಿವಡ್ಡರ, ಮಹಾಂತೇಶ ದೊಡ್ಡಮನಿ, ಮಂಜುನಾಥ ಕಟ್ಟಿಮನಿ, ಹನುಮಪ್ಪ ಬಂಡಿವಡ್ಡರ, ಶಿವಕುಮಾರ ಗೊಂಡಬಾಳ, ಐ.ಎಸ್. ದೊಡ್ಡಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts